ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನವಮಿ ಹಬ್ಬದ ಸಂದರ್ಭದಲ್ಲಿ ಕೋಮು ಘರ್ಷಣೆಗಳ ಕುರಿತು ಬಿಹಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಟೋ ಅಹಿಂಸಾ ಓಟದ ಸಂದರ್ಭದಲ್ಲಿ ಕೇಂದ್ರ ಸಚಿವರು ಈ ಮಾತುಗಳನ್ನಾಡಿದರು.
ಹಿಂಸಾಚಾರದ ಬಗ್ಗೆ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಠಾಕೂರ್, ರಾಜ್ಯದಲ್ಲಿ “ಜಂಗಲ್‌ರಾಜ್” ಮರಳಿದ್ದಾರೆ ಎಂದು ಆರೋಪಿಸಿದರು. ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಲಾಲು ಆಡಳಿತದಲ್ಲಿ ಇದ್ದ ಜಂಗಲ್‌ರಾಜ್ ಮತ್ತೆ ಮರಳಿರುವುದು ಅತ್ಯಂತ ದುರದೃಷ್ಟಕರ ಎಂದರು.
ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅನುರಾಗ್ ಠಾಕೂರ್, “ಮಮತಾ ದೀದಿ ನಿದ್ರಿಸುತ್ತಿದ್ದಾಳೆ, ಅವರು ಒಂದು ವರ್ಗಕ್ಕೆ ಮಾತ್ರ ಭದ್ರತೆಯನ್ನು ನೀಡುತ್ತಿದ್ದಾರೆ, ಹಿಂದೂ ಸಮುದಾಯದ ‘ಶೋಭಾ ಯಾತ್ರೆ’ ಸಂದರ್ಭದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದ ಘಟನೆಗಳ ಬಗ್ಗೆ ದೂರಿದರು. ಮುಖ್ಯಮಂತ್ರಿಯ ರಕ್ಷಣೆಯಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸುವುದು ಅತ್ಯಂತ ದುರದೃಷ್ಟಕರ ಆಕೆ ಕೇವಲ ಪ್ರೇಕ್ಷಕರ ಪಾತ್ರವನ್ನು ನಿರ್ವಹಿಸುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ, ಮಾರ್ಚ್ 30 ರಂದು ರಾಮನವಮಿ ಆಚರಣೆಯ ನಡುವೆ ಹೌರಾದಲ್ಲಿ ಎರಡು ಗುಂಪುಗಳು ಘರ್ಷಣೆಗೊಂಡವು. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಘರ್ಷಣೆಯ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಧ್ವಂಸಗೊಳಿಸಲಾಯಿತು.
ಒಟ್ಟು 38 ಜನರನ್ನು ಬಂಧಿಸಲಾಗಿದೆ, ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.