March 9, 2026
Monday, March 9, 2026
spot_img

ಮೂರನೇ ದಿನಕ್ಕೆ ಕಾಲಿಟ್ಟ ಮಮತಾ ಧರಣಿ: ಬಿಜೆಪಿಯಿಂದ ‘ವ್ಯಾನಿಶ್ ಆಯೋಗ’ದ ದುರುಪಯೋಗ ಎಂದ ದೀದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎಸ್‌ಐಆರ್‌ ವಿರುದ್ಧ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಧರಣಿ ಮೂರನೇ ದಿನವು ಮುಂದುವರೆದಿದೆ. ಚುನಾವಣಾ ಆಯೋಗವನ್ನು ‘ವ್ಯಾನಿಶ್‌ ಆಯೋಗ’ವೆಂದು ಕರೆದು ವಾಗ್ದಾಳಿ ನಡೆಸಿದ್ದಾರೆ.

‘ಒಂದು ರಾಷ್ಟ್ರ, ಒಬ್ಬ ನಾಯಕ, ಒಂದು ಪಕ್ಷ’ ಎಂಬ ಉನ್ಮಾದದಲ್ಲಿ ಜನ ವಿರೋಧಿ ಮಹತ್ವಾಕಾಂಕ್ಷೆಗಳ ಈಡೇರಿಕೆಗಾಗಿ ಪ್ರಜಾಪ್ರಭುತ್ವ ಸಂಸ್ಥೆ ಮತ್ತು ಸಾಂವಿಧಾನಿಕ ಹುದ್ದೆಗಳನ್ನು ವ್ಯವಸ್ಥಿತವಾಗಿ ದುರುಪಯೋಗ ಮಾಡಿಕೊಂಡಿದೆ. ಈ ಮೂಲಕ ಕಾನೂನುಬದ್ಧ ಮತದಾರರನ್ನು ಅಳಿಸಿಹಾಕಲು ಬಿಜೆಪಿ ‘ವ್ಯಾನಿಶ್ ಆಯೋಗ’ವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ವರ್ಷಗಳಿಂದ, ಬಿಜೆಪಿ ಕೇಂದ್ರೀಯ ಸಂಸ್ಥೆಗಳು, ರಾಷ್ಟ್ರೀಯ ಆಯೋಗಗಳು, ಗುಲಾಮ ಗೋದಿ ಮಾಧ್ಯಮ ಹಾಗೂ ನ್ಯಾಯಾಂಗದ ಒಂದು ವಿಭಾಗವನ್ನು ಬಂಗಾಳದ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ. ಅವರು ಮತದಾರರ ಪಟ್ಟಿಯಿಂದ ಕಾನೂನುಬದ್ಧ ಮತದಾರರನ್ನು ಅಳಿಸಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !