ಹೊಸದಿಗಂತ ಮಡಿಕೇರಿ:
ವ್ಯಕ್ತಿಯೊಬ್ಬರು ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಜೆ ಸೋಮವಾರಪೇಟೆ ಸಮೀಪದ ಐಗೂರಿನಲ್ಲಿ ನಡೆದಿದೆ.
ಐಗೂರು ಗ್ರಾಮದ ಮಧು ಅಲಿಯಾಸ್ ಅಶೋಕ್ (35) ಎಂಬವರೇ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.