ಹೊಸದಿಗಂತ ವರದಿ ಮಂಡ್ಯ :
ಸೆಲ್ಫಿ ತೆಗೆದುಕೊಳ್ಳಹೋದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಕೊಚ್ಚಿಹೋಗಿರುವ ಘಟನೆ ಶ್ರೀರಂಗಪಟ್ಟಣದ ಕಾವೇರಿ ನದಿ ಬಳಿ ನಡೆದಿದೆ.
ಮೈಸೂರಿನ ಮಹೇಶ್ (36) ಎಂಬಾತನೇ ಕಾವೇದಿ ನದಿಯಲ್ಲಿ ಕೊಚ್ಚಿದವನಾಗಿದ್ದಾನೆ.
ಮೈಸೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಸ್ನೇಹಿತರೊಂದಿಗೆ ಕೆ.ಆರ್.ಎಸ್. ಭಾಗಕ್ಕೆ ಪಿಕ್ನಿಕ್‌ಗೆ ಬಂದಿದ್ದ.
ಸರ್ವಧರ್ಮ ಆಶ್ರಮದ ಬಳಿ ಫೋಟೋ ತೆಗೆಸಿಕೊಳ್ಳಲು ಹೋಗಿ ಆಯತಪ್ಪಿ ಕಾಲು ಜಾರಿ ಕಾವೇರಿ ನದಿಗೆ ಬಿದ್ದಿದ್ದಾನೆ. ನದಿಯಲ್ಲಿ ನೀರು ಹೆಚ್ಚಿದ ಕಾರಣ ಮಹೇಶ್ ನದಿಯಲ್ಲಿ ಕೊಚ್ಚಿಹೋಗಿದ್ದಾನೆ. ನದಿಯಲ್ಲಿ ಕೊಚ್ಚಿಹೋದ ಮಹೇಶ್‌ಗಾಗಿ ಶೋಧ ಕಾರ‌್ಯ ನಡೆಸಲಾಗುತ್ತಿದೆ. ಅಗ್ನಿಶಾಮಕದ ದಳದ ಸಿಬ್ಬಂದಿಗಳೂ ಮಹೇಶ್‌ಗಾಗಿ ಶೋಧ ನಡೆಸಿದ್ದಾರೆ.
ಈ ಸಂಬಂಧ ಕೆ.ಆರ್.ಎಸ್. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.