ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಯ ಮೇಲೆ ಬದುಕುವ ಅದೃಷ್ಟ ಇತ್ತು ಅಂತಾದರೆ, ಸಾವು ಕೂಡ ಹಿಂದೆ ಸರಿಯುತ್ತದೆ. ಲಾಂಡ್ರಿಯಲ್ಲಿ ಬಟ್ಟೆ ತೊಳೆಯುವ ಯಂತ್ರವು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ದೊಡ್ಡ ಸ್ಫೋಟದೊಂದಿಗೆ ಬೆಂಕಿ ವ್ಯಾಪಿಸಿದೆ. ಘಟನೆಯ ಕೆಲವು ಸೆಕೆಂಡುಗಳ ಮೊದಲು ಹೊರಗೆ ಹೋದ ವ್ಯಕ್ತಿ ಬದುಕುಳಿದರು. ಈ ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಂಡ್ರಿಯಿಂದ ಚೀಲಗಳೊಂದಿಗೆ ಒಬ್ಬ ವ್ಯಕ್ತಿ ಬಾಗಿಲು ತೆರೆದು ಹೊರಗೆ ಹೋದ ಕೂಡಲೇ ವಾಷಿಂಗ್ ಮೆಷಿನ್‌ನಲ್ಲಿ ಸ್ಫೋಟ ಸಂಭವಿಸಿದೆ. ಅದರ ನಂತರ ಇಡೀ ಕೋಣೆ ಬೆಂಕಿಗೆ ಆಹುತಿಯಾಗಿತ್ತು. ವಿಡಿಯೋ ನೋಡಿದರೆ ಯಾರಿಗೂ ಹಾನಿಯಾಗಿಲ್ಲ ಎಂದು ಅನಿಸುತ್ತಿದೆ. ಇಡೀ ಕೋಣೆ ಸ್ಫೋಟಗೊಂಡಾಗ ಹತ್ತಿರದ ಯಾರಾದರೂ ಗಾಯಗೊಂಡಿರಬಹುದೇ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಆದರೆ ಈ ಅಪಘಾತಕ್ಕೆ ಕಾರಣಗಳು ತಿಳಿದುಬಂದಿಲ್ಲ.
Someone didn't check their pockets pic.twitter.com/MjpK5mPba7
— OnlyBangers (@OnlyBangersEth) April 2, 2023