ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಸಾವಿಗೀಡಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಗ್ರಾಮದ ನಿವಾಸಿ ಕುಕ್ಕನೂರು ಪುರುಷೋತ್ತಮ (72) ಎಂಬವರೇ ಸಾವಿಗೀಡಾದವರಾಗಿದ್ದಾರೆ.
ಪುರುಷೋತ್ತಮ ಅವರು ಎಂದಿನಂತೆ ತಮ್ಮ ಕರಡಿಗೋಡಿನ ತೋಟ ವೀಕ್ಷಣೆಗೆ ತೆರಳಿದ್ದರು. ಸುಮಾರು ಸಮಯವಾದರೂ ತಂದೆ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮಗಳು ಸ್ಥಳೀಯ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದು, ತೋಟದಲ್ಲೇ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಪುರುಷೋತ್ತಮ ಅವರು ಮೃತಪಟ್ಟಿರುವುದು ಗೋಚರಿಸಿದೆ.
ಆನೆ ದಾಳಿಯಿಂದಾಗಿ ಮೃತಪಟ್ಟ ಕುಕ್ಕನೂರು ಪುರುಷೋತ್ತಮ ಅವರು ಮಡಿಕೇರಿ ತಾಲೂಕು ತಹಶೀಲ್ದಾರ್ ಪ್ರವೀಣ್ ಅವರ ಮಾವ.