ಒಂದಲ್ಲಾ..ಎರಡಲ್ಲಾ ಬರೋಬ್ಬರಿ 292ಬಾರಿ ಸಿನಿಮಾ ವೀಕ್ಷಣೆ, ಗಿನ್ನಿಸ್‌ ದಾಖಲೆ ಬರೆದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿನಿಮಾ ಹುಚ್ಚಿದ್ದರೆ ಒಂದೆರೆಡು ಬಾರಿ ನೋಡಬಹುದು. ತೀರಾ ಇಷ್ಟ ಅಂದರೆ, ಐದಾರು ಅಥವಾ ಹತ್ತು ಸಲ ಸಿನಿಮಾ ವೀಕ್ಷಣೆ ಮಾಡಬಹುದು ಆದರೆ, ಇಲ್ಲೊಬ್ಬ ಯುವಕ ಸಿನಿಮಾ ನೋಡಿರುವ ಪರಿ ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತೆ. ಆತನಿಗಿದ್ದ ಸಿನಿಮಾ ಹುಚ್ಚೇ ಆತನನ್ನು ಗಿನ್ನಿಸ್ ವರ್ಲ್ಡ್ ಬುಕ್ ರೆಕಾರ್ಡ್ ಸಾಧನೆಗೆ ಕಾರಣವಾಯಿತು. ಒಂದೇ ಸಿನಿಮಾವನ್ನು ಸತತ 292 ಬಾರಿ ನೋಡಿ ಗಿನ್ನಿಸ್‌ ದಾಖಲೆ ಮಾಡಿದ್ದಾರೆ. ಫ್ಲೋರಿಡಾದ ರಾಮಿರೊ ಅಲಾನಿಸ್ ಎಂಬ ಯುವಕ ಹಾಲಿವುಡ್ ಸಿನಿಮಾ ಸ್ಪೈಡರ್ ಮ್ಯಾನ್ ಸಿನಿಮಾವನ್ನು 292ಬಾರಿ ನೋಡಿದ್ದಾನಂತೆ….

‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಸಿನಿಮಾವನ್ನು ಕೇವಲ 1 ತಿಂಗಳಲ್ಲಿ 292 ಬಾರಿ ವೀಕ್ಷಿಸುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾನೆ. ಈ ಸಿನಿಮಾದ ರನ್ ಟೈಂ 720 ಗಂಟೆಗಳು. ಹಾಗಾಗಿ ರಾಮಿರೊ 30 ದಿನ ತೆಗೆದುಕೊಂಡಿದ್ದಾರೆ. ರಾಮಿರೋ ಸಿನಿಮಾ ನೋಡಿ ದಾಖಲೆ ಬರೆಯೋದು ಹೊಸದೇನಲ್ಲ. ಈ ಹಿಂದೆಯೂ ಹಲವು ದಾಖಲೆಗಳನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ.

2019 ರಲ್ಲಿ, ಅವರು Avengers: Endgame ಅನ್ನು 191 ಬಾರಿ ವೀಕ್ಷಿಸುವ ಮೂಲಕ ದಾಖಲೆಯನ್ನು ಸ್ಥಾಪಿಸಿದರು. ಅರ್ನಾಡ್ ಕ್ಲೈನ್ ​​2021 ರಲ್ಲಿ ಅವರ ಹಳೆಯ ದಾಖಲೆಯನ್ನು ಮುರಿದರು. ಸ್ಪೈಡರ್ ಮ್ಯಾನ್ ಚಿತ್ರ ಬಿಡುಗಡೆಯಾದಾಗಿನಿಂದ ಥಿಯೇಟರ್‌ಗಳಲ್ಲಿ ಪ್ರದರ್ಶನವನ್ನು ನಿಲ್ಲಿಸುವವರೆಗೂ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳನ್ನು ನೋಡುತ್ತಿದ್ದೆ ಎಂದು ರಾಮಿರೋ ಹೇಳುತ್ತಾರೆ, ರಾಮಿರೋ ಅವರ ಗಿನ್ನಿಸ್ ದಾಖಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!