ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರಿಗೆ ಯಾವುದೇ ಸಂದೇಹ ಬಂದರೂ ಗೂಗಲ್, ಯೂಟ್ಯೂಬ್ ನೋಡಿ ತಮ್ಮ ಗೊಂದಲವನ್ನು ಪರಿಹರಿಸಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಇವು ದಾರಿತಪ್ಪಿಸುತ್ತವೆ ಇಂಥದ್ದೊಂದು ಘಟನೆ ಈಗ ಸಖತ್ ಸುದ್ದಿಯೊಂದಿಗೆ ಯೂಟ್ಯೂಬ್ ವಿಡಿಯೋ ನೋಡಿ ಸ್ವಂತ ವೈದ್ಯ ಮಾಡಿಕೊಂಡ ವ್ಯಕ್ತಿ ಇದೀಗ ಆಸ್ಪತ್ರೆ ಪಾಲಾಗಿರುವ ಘಟನೆ ಜಾರ್ಖಂಡ್ ರಾಜ್ಯದಲ್ಲಿ ನಡೆದಿದೆ.
ಲತೇಹರ್ ಜಿಲ್ಲೆಯ ಬಲುಮತ್ ಮಂಡಲದ ತೋಟಿ ಹೆಸ್ಲಾ ಗ್ರಾಮದ ಅವದೇಶ್ ಅವರು ಅತಿಸಾರದಿಂದ ಬಳಲುತ್ತಿದ್ದರು. ಯಾರಿಗಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಾಣುತ್ತಾರೆ. ಆದರೆ ಅವದೇಶ್ ಆಸ್ಪತ್ರೆಗೆ ಹೋಗದೆ, ಯೂಟ್ಯೂಬ್ ಮಾರ್ಗವನ್ನು ಆರಿಸಿಕೊಂಡರು.
ಅತಿಸಾರ ಕಡಿಮೆ ಮಾಡಲು ಸಲಹೆಗಳಿಗಾಗಿ ಯೂಟ್ಯೂಬ್ ಸರ್ಚ್ ಮಾಡಿದ್ದಾರೆ. ಕರ್ಪೂರ ನುಂಗುವುದರಿಂದ ಅತಿಸಾರ ಕಡಿಮೆಯಾಗುತ್ತದೆ ಎಂದು ಅನೇಕ ವಿಡಿಯೋಗಳು ಹೇಳುವುದನ್ನು ಅವರು ಗಮನಿಸಿದರು. ಅಷ್ಟೇ, ಮರುಮಾತಿಲ್ಲದೆ ಅದನ್ನು ಕುರುಡಾಗಿ ಅನುಸರಿಸಿ ಒಟ್ಟಿಗೆ 10 ಕರ್ಪೂರಗಳನ್ನು ನುಂಗಿದರು. ಅವರ ಆರೋಗ್ಯ ಸುಧಾರಿಸುವ ಬದಲಿಗೆ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಪ್ರಮಾಣದ ಕರ್ಪೂರದ ಬಿಲ್ಲೆಗಳನ್ನು ನುಂಗಿದ್ದೇ ಕಾರಣ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.
ಯೂಟ್ಯೂಬ್ ವೀಡಿಯೋ ನೋಡುವ ಅಥವಾ ಗೂಗಲ್ ನಲ್ಲಿ ಸರ್ಚ್ ಮಾಡುವ ಸ್ವಯಂ ಚಿಕಿತ್ಸೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ಸುಧಾರಿಸುವುದಿಲ್ಲ, ಆದರೆ ಖಂಡಿತವಾಗಿಯೂ ನಿಮ್ಮನ್ನು ಹೆಚ್ಚು ಅಪಾಯಕ್ಕೆ ಸಿಲುಕಿಸುವುದಂತು ಗ್ಯಾರೆಂಟಿ.