Saturday, December 13, 2025

ಜನರಿಗೆ ಏನೂ ಮಾಡದಿದ್ದರೂ ನಾಳೆಯೇ ಪ್ರಧಾನಿ ಆಗಿಬಿಡಬೇಕೆಂಬ ಅಸೆ: ರಾಹುಲ್-ಸಿಧುಗೆ ಮಾನ್ ಟಾಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ನವಜೋತ್ ಸಿಂಗ್ ಸಿಧು ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ .

ಇಬ್ಬರೂ ನಾಯಕರು ಉನ್ನತ ಹುದ್ದೆಗಳಿಗೇರಲು ಹಂಬಲಿಸುತ್ತಾರೆ. ಆದರೆ ಜನರಿಗಾಗಿ ತಾವು ಏನು ಮಾಡಿದ್ದೇವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.

ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾಗ ಸಿಧು ತಮ್ಮ ಇಲಾಖೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ, ಜನರ ಕಲ್ಯಾಣಕ್ಕಾಗಿ ಏನಾದರೂ ಮಾಡಬಹುದಿತ್ತು ಎಂದು ತಿಳಿಸಿದರು.

ರಾಹುಲ್ ಗಾಂಧಿ ಮತ್ತು ನವಜೋತ್ ಸಿಂಗ್ ಸಿಧು ಅವರಿಗೂ ಒಂದೇ ಸಮಸ್ಯೆ ಇದೆ . ನನ್ನನ್ನು ಪ್ರಧಾನಿ ಮಾಡಿ, ನಾನು ಜನರಿಗೆ ಏನಾದರೂ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ಜನರು ಮೊದಲು ಏನಾದರೂ ಮಾಡಿ, ನಂತರ ನಾವು ನಿಮ್ಮನ್ನು ಪ್ರಧಾನಿ ಮಾಡುತ್ತೇವೆ ಎಂದು ಹೇಳುತ್ತಾರೆ. ನವಜೋತ್ ಸಿಧು ಕೂಡ ಅದೇ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳುವ ಮೂಲಕ ಮಾನ್ ಇಬ್ಬರೂ ನಾಯಕರನ್ನು ಕೆಣಕಿದರು.

ಕೆಲವು ದಿನಗಳ ಹಿಂದೆ, ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು, ಕಾಂಗ್ರೆಸ್ ಪಂಜಾಬ್‌ನಲ್ಲಿ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ, ಅವರ ಪತಿ ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂದು ಹೇಳಿದ್ದರು.

ನವಜೋತ್ ಕೌರ್ ಅವರು (ನವಜೋತ್ ಸಿಂಗ್ ಸಿಧು) ಬಳಿ ಯಾವುದೇ ಪಕ್ಷಕ್ಕೆ ದಾನ ಮಾಡಲು ಹಣವಿಲ್ಲ. ಆದರೆ ಅವರು ಪಂಜಾಬ್ ಅನ್ನು ಸುವರ್ಣ ರಾಜ್ಯವನ್ನಾಗಿ ಪರಿವರ್ತಿಸಬಹುದು ಎಂದು ಹೇಳಿದ್ದರು. ಮುಖ್ಯಮಂತ್ರಿ ಹುದ್ದೆಗೆ ‘500 ಕೋಟಿ ರೂಪಾಯಿ’ ಎಂಬ ಅವರ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಯಿತು. ನಂತರ ಪಂಜಾಬ್ ಕಾಂಗ್ರೆಸ್ ಅವರನ್ನು ಅಮಾನತುಗೊಳಿಸಿತು.

error: Content is protected !!