ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಮತ್ತೊಂದು ಮೂತ್ರ ವಿಸರ್ಜನೆಯ ಘಟನೆ ಬೆಳಕಿಗೆ ಬಂದಿದೆ.
ಏರ್ ಇಂಡಿಯಾದ AI2336 ಸಂಖ್ಯೆಯ ವಿಮಾನದಲ್ಲಿ ಬ್ಯಾಂಕಾಕ್ಗೆ ಪ್ರಯಾಣಿಸುವಾಗ ಪಕ್ಕದಲ್ಲಿದ್ದ ವ್ಯಕ್ತಿಯಿಂದ ಈ ಅಚಾತುರ್ಯ ನಡೆದಿದೆ. ತನ್ನ ತಪ್ಪಿನ ಅರಿವಾಗುತ್ತಿದ್ದಂತೆ ಆ ವ್ಯಕ್ತಿ ಕೂಡಲೇ ಸಹ ಪ್ರಯಾಣಿಕನ ಬಳಿ ಕ್ಷಮೆಯಾಚಿಸಿ ದೂರು ನೀಡದಂತೆ ಬೇಡಿಕೊಂಡಿದ್ದಾನೆ.
ಏರ್ ಇಂಡಿಯಾ ಸಿಬ್ಬಂದಿ ಪ್ರಯಾಣಿಕನ ನೆರವಿಗೆ ಧಾವಿಸಿದ್ದು, ಮತ್ತೊಂದು ಸೀಟ್ನ ಸೌಲಭ್ಯ ಒದಗಿಸಿದ್ದಾರೆ. ಮೂತ್ರ ವಿಸರ್ಜನೆಯಿಂದ ಒದ್ದೆಯಾದ ಬಟ್ಟೆಯನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡಿದ್ದಾರೆ.
ಏರ್ಲೈನ್ ವರದಿಯ ಪ್ರಕಾರ ವಿಮಾನದಲ್ಲಿ ಮೂರ್ತ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಭಾರತೀಯ ಮೂಲದ ಮಸಂದ್ ಎನ್ನಲಾಗಿದೆ. ಸಂತ್ರಸ್ತ ಪ್ರಯಾಣಿಕ ಯೋಶಿಜಾನೆ ಪ್ರತಿಷ್ಠಿತ ಕಂಪನಿಯ ಎಂ.ಡಿ ಆಗಿದ್ದು, ಈ ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆಯ ಘಟನೆ ನಡೆದಿರೋದು ಇದೇ ಮೊದಲಲ್ಲ. ನವೆಂಬರ್ 26, 2022ರಲ್ಲಿ ನ್ಯೂಯಾರ್ಕ್ನಿಂದ ದೆಹಲಿಗೆ ಬರುವಾಗ ಇದೇ ರೀತಿ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಂಚಲನ ಸೃಷ್ಟಿಸಿತ್ತು.