ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ದಫನ ಮಾಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 4 ರಂದು ದೂರು ನೀಡಿದ ವ್ಯಕ್ತಿ ಶುಕ್ರವಾರ (ಇಂದು) ಸಂಜೆಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಇಬ್ಬರು ವಕೀಲರ ಜೊತೆ ಹಾಜರಾಗಿದ್ದಾನೆ.
ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರಾಗಿ BNS 183 ಹೇಳಿಕೆ ನೀಡಿದ್ದಾನೆ. ನ್ಯಾಯಾದೀಶರ ಮುಂದೆ ಹಾಜರಾಗಿ ಬಳಿಕ ನ್ಯಾಯಾದೀಶರ ಅದೇಶದಂತೆ ಪೋಲಿಸ್ ಠಾಣೆಗೆ ಕರೆತಂದ ಪೋಲೀಸರು ದಾಖಲೆ ಸಂಗ್ರಹಿಸಿದ್ದಾರೆ. ಹೆಚ್ಚಿನ ಮಾಹಿತಿ ಪೋಲಿಸ್ ತಖಿಖೆಯಿಂದ ತಿಳಿಯಬೇಕಾಗಿದೆ.