ಬೆಂಗಳೂರಿನಲ್ಲಿ ಮ್ಯಾನ್ ಹೋಲ್​​ಗೆ ಇಳಿದಿದ್ದ ವ್ಯಕ್ತಿ ಸಾವು ಕೇಸ್: ನಾಲ್ವರು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜುಲೈ 21 ರಂದು ಮ್ಯಾನ್ ಹೋಲ್​ಗೆ ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನಪ್ಪಿದ್ದ ಘಟನೆ ಬೆಂಗಳೂರಿನ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಸಾವಿರ ರೂ.‌ ಹಣ ಕೊಟ್ಟು ಮ್ಯಾನ್ ಹೋಲ್​ಗೆ ಇಳಿಸಿ ಆ ಸಾವಿಗೆ ಕಾರಣವಾದವರು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಆಶ್ರಯ ನಗರದ ‌ನಿವಾಸಿಗಳಾದ ನಾಗರಾಜ್, ಆಂಥೋನಿ, ದೇವರಾಜ್ ಮತ್ತು ಆನಂದ್ ಬಂಧಿತರು.

ಮ್ಯಾನ್ ಹೋಲ್​​ಗೆ ಕಾರ್ಮಿಕರನ್ನ ಇಳಿಸಬಾರದೆಂಬ ಸುಪ್ರೀಂಕೋರ್ಟ್ ಕಾನೂನು ದೇಶದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗಿತ್ತು. ಆದರೂ ಇಂತ ಕೆಲಸಗಳು ಆಗಾಗ ನಡೆಯುತ್ತಿರುತ್ತವೆ. ಜುಲೈ 21 ರಂದು ಬೆಂಗಳೂರನ ಆರ್​ಎಂಸಿ ಯಾರ್ಡ್​ನ ಆಶ್ರಯ ನಗರದಲ್ಲಿ ಪುಟ್ಟಸ್ವಾಮಿ ಎಂಬಾತ ಹಣದ ಆಸೆಗೆ ಮ್ಯಾನ್ ಹೋಲ್‌ಗೆ ಇಳಿದು ತನ್ನ ಜೀವವನ್ನೇ ಕಳೆದುಕೊಂಡಿದ್ದ.‌ ಈ ಕೇಸ್ ಸಂಬಂಧ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!