CINE | ರಶ್ಮಿಕಾಗೆ ದೋಖಾ, 80 ಲಕ್ಷ ರೂಪಾಯಿ ಮೋಸ ಮಾಡಿದ ಮ್ಯಾನೇಜರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ತಮ್ಮ ಮ್ಯಾನೇಜರ್‌ನಿಂದಲೇ ಮೋಸ ಹೋಗಿದ್ದಾರೆ.
ರಶ್ಮಿಕಾ ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದಲೂ ಜೊತೆಯೇ ಇದ್ದ ಮ್ಯಾನೇಜರ್ 80ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾರೆ.

ನಂಬಿಕೆ ದ್ರೋಹ ಮಾಡಿದ ಮ್ಯಾನೇಜರ್ ಮೇಲೆ ರಶ್ಮಿಕಾ ಪೊಲೀಸ್ ಕಂಪ್ಲೆಂಟ್ ನೀಡದೇ ಬರೀ ಕೆಲಸದಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಈ ಮ್ಯಾನೇಜರ್ ಯಾರು? ಯಾಕೆ ಮೋಸ ಮಾಡಿದ್ದಾರೆ? ಹೇಗೆ ಮೋಸ ಮಾಡಿದ್ದಾರೆ ಅನ್ನೋ ಬಗ್ಗೆ ರಶ್ಮಿಕಾ ಯಾವುದೇ ಮಾಹಿತಿ ನೀಡಿಲ್ಲ.

ಈ ಬಗ್ಗೆ ಅಧಿಕೃತ ಹೇಳಿಕೆ ಕೂಡ ನೀಡಿಲ್ಲ. ಬಾಲಿವುಡ್‌ನಲ್ಲಿ ಬೆರೆತು ಹೋಗಿರುವ ರಶ್ಮಿಕಾ ಮಂದಣ್ಣ ಈಗಾಗಲೇ ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ರೈನ್‌ಬೋ ಕೆಲಸದಲ್ಲಿ ಬ್ಯುಸಿಯಾಗಿದ್ದು, ವಿಕ್ಕಿ ಕೌಶಲ್ ಹಾಗೂ ಶಾಹಿದ್ ಕಪೂರ್ ಸಿನಿಮಾದಲ್ಲಿಯೂ ರಶ್ಮಿಕಾ ಮಿಂಚಲಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!