ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಮೋಹನ್ ಬಾಬು ಮಗ ಮಂಚು ವಿಷ್ಣು ತಮ್ಮ ಸಿನಿಮಾಗಳಿಗಿಂತ ತಮ್ಮ ಕಾಮೆಂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ವಿಷ್ಣು ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ಬಿಜಿನೆಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡುತ್ತಾ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಸಿನಿಮಾ, ರಾಜಕೀಯ ಭವಿಷ್ಯದ ಕುರಿತು ವ್ಯಂಗ್ಯವಾಡಿದರು.
ಪವನ್ ಕಲ್ಯಾಣ್ ರಾಜಕೀಯದಲ್ಲಿ ಗೆಲ್ಲುತ್ತಾರಾ ಎಂಬ ಪ್ರಶ್ನಗೆ ಉತ್ತರಿಸಿದ ಅವರು, ಪವನ್ ಕಲ್ಯಾಣ್ ಅವರ ರಾಜಕೀಯದ ಬಗ್ಗೆ ನಾನು ಮಾತನಾಡುವುದಿಲ್ಲ. ಸಿನಿಮಾ ವಿಚಾರದಲ್ಲಿ ಅವರೊಬ್ಬ ಸ್ಟಾರ್ ಹೀರೋ. ಒಂದು ಸಿನಿಮಾ ಆಡದಿದ್ದರೂ ಇನ್ನೊಂದು ಸಿನಿಮಾ ದೊಡ್ಡ ಹಿಟ್ ಆಗುತ್ತದೆ. ಅವರ ಫ್ಲಾಪ್ ಸಿನಿಮಾ ಕೂಡ ಕಲೆಕ್ಷನ್ ಪಡೆಯುತ್ತದೆ.
ರಾಜಕೀಯದ ಬಗ್ಗೆ ಈಗಲೇ ಹೇಳುವುದ ಕಷ್ಟ. ಆರು ತಿಂಗಳ ನಂತರ ಏನು ಬೇಕಾದರೂ ನಡೆಯಬಹುದು. ಜನ ತುಂಬಾ ಬುದ್ಧಿವಂತರಿದ್ದಾರೆ. ಅನೇಕರು ಸಿನಿಮಾದೊಂದಿಗೆ ರಾಜಕೀಯವನ್ನು ಜೋಡಿಸುವುದಿಲ್ಲ. ಎಂಥೆಂಥಾ ಹೆಸರು ಮಾಡಿದ ಘಟಾನುಘಟಿಗಳೇ ರಾಜಕೀಯ ಚದುರಂಗದಲ್ಲಿ ಸೋತಿದ್ದಾರೆ. ಯಾರಿಗೆ ಮತ ಹಾಕಬೇಕೆಂಬುದು ಜನರಿಗೆ ಬಿಟ್ಟ ವಿಚಾರ ಎಂದರು. ಮಂಚು ವಿಷ್ಣು ಅವರ ಕಾಮೆಂಟ್ ವೈರಲ್ ಆಗಿದ್ದು, ಇದಕ್ಕೆ ಪವನ್ ಅಭಿಮಾನಿಗಳಾದರೂ ಪ್ರತಿಕ್ರಿಯಿಸುತ್ತಾರಾ ನೋಡೋಣ.