ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದೆಲ್ಲೆಡೆ ರಾಮ ಜಪ ಆರಂಭವಾಗಿದ್ದು, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಪ್ರಯುಕ್ತ ರಾಜ್ಯದ ಶಾಲೆಗಳಿಗೆ ರಜೆ ಕೊಡುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಕೆಲ ಖಾಸಗಿ ಶಾಲೆಗಳು ಸ್ವಯಂಪ್ರೇರಿತರಾಗಿ ಸೋಮವಾರ ರಜೆ ಘೋಷಣೆ ಮಾಡಿದ್ದಾರೆ. ರುಪ್ಸಾ ಅಡಿಯಲ್ಲಿ ಬರುವ ಕೆಲ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ.
ನಾಳೆ ರಜೆ ಇರುವುದರಿಂದ ಬೇರೆ ರಜೆ ದಿನ ಶಾಲೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಪರೀಕ್ಷೆಗಳು ಬರುತ್ತಿರುವುದರಿಂದ ನಾಳೆಯ ಬದಲು ಭಾನುವಾರವೇ ತರಗತಿಗಳು ನಡೆಯಲಿವೆ ಎಂದು ನಿರ್ಧಾರಿಸಲಾಗಿದೆ.