ಹೊಸದಿಗಂತ ವರದಿ,ಮಂಡ್ಯ :
ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ, ಇಲ್ಲಿನ ವಿದ್ಯಾನಗರ ನಿವಾಸಿ ವೆಂಕಟೇಶ್ ಟೇಮ್ಕರ್ (55) ತಿರುಪತಿ-ತಿರುಮಲ ಬೆಟ್ಟ ಹತ್ತುವ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಳೆದ ಶುಕ್ರವಾರ ಮಂಡ್ಯದಿಂದ ತಿರುಪತಿ ಪ್ರವಾಸಕ್ಕೆ ತೆರಳಿದ್ದ ವೆಂಕಟೇಶ್ ಅವರು, ಶನಿವಾರ ರಾತ್ರಿ 9 ಗಂಟೆ ಸಮಯದಲ್ಲಿ ಬೆಟ್ಟ ಹತ್ತುವ ವೇಳೆ ತೀವ್ರ ಆಯಾಸಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತ ವೆಂಕಟೇಶ್ ಮೃತ ದೇಹ ಭಾನುವಾರ ರಾತ್ರಿ ಮಂಡ್ಯಕ್ಕೆ ತರಲಾಗಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಹಾಲಹಳ್ಳಿ ಬಡಾವಣೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.