ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊನೆಗೂ ಮಂಡ್ಯದ ಮೈಶುಗರ್ ಕಾರ್ಖಾನೆಗೆ ಅನುದಾನ ದೊರೆತಿದ್ದು, ಇಂದು ಸಚಿವ ಶಿವಾನಂದ್ ಎಸ್. ಪಾಟೀಲ್ ಕಾರ್ಖಾನೆಗೆ ಚಾಲನೆ ನೀಡಿದ್ದಾರೆ.
ಬಾಯ್ಲರ್‌ಗೆ ಬೆಂಕಿ ಹಾಕುವ ಮೂಲಕ ಸಚಿವರು ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಮೊದಲ ಅನುದಾನ ಇದಾಗಿದೆ, ಮಂಡ್ಯಕ್ಕೆ ಮೊದಲ ಅನುದಾನ ಸಿಕ್ಕಿದ್ದು, ಸರ್ಕಾರ 50 ಕೋಟಿ ರೂಪಾಯಿ ನೀಡಿದೆ. ರೈತರ ಪರವಾಗಿ ನಿಲ್ಲುತ್ತೀವಿ ಎಂದು ನಮ್ಮ ಸರ್ಕಾರ ಯಾವಾಗಲೂ ಹೇಳಿದ್ದು, ಇದೀಗ ನುಡಿದಂತೆ ನಡೆದಿದೆ.
ಜೂನ್ ಅಂತ್ಯದಲ್ಲಿ ಕಬ್ಬು ನುರಿಯುವ ಕಾರ್ಯ ಆರಂಭವಾಗಲಿದೆ, ಯಾವ ಸಮಸ್ಯೆ ಬಾರದಂತೆ ಮೈಶುಗರ್ ಕಾರ್ಖಾನೆ ನಡೆಯಲಿದೆ ಎಂದಿದ್ದಾರೆ.