ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಬರ್ 1. ಸ್ವಚ್ಛತಾ ನಗರಿ ಎಂಬ ಹೆಸರು ಪಡೆಯಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಮಂಡ್ಯ ರಮೇಶ್ ಅವರನ್ನು ಸ್ವಚ್ಛತಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಕಳೆದ ಎಂಟು ವರ್ಷಗಳ ಹಿಂದೆ ಮೊದಲ ಸ್ಥಾನ ಪಡೆದಿದ್ದ ಮೈಸೂರು ಕ್ರಮೇಣ ಟಾಪ್ 10ಲಿಸ್ಟ್‌ನಿಂದ ಹೊರಬಿದ್ದಿತ್ತು. ಇದೀಗ ಸ್ವಚ್ಛತಾ ನಗರಿಗಳ ಲಿಸ್ಟ್‌ನಲ್ಲಿ ಮೊದಲ ಮೆಟ್ಟಿಲಿನಲ್ಲಿರಲು ಮತ್ತೆ ಪ್ರಯತ್ನಿಸುತ್ತದೆ.
ಮಹಾನಗರ ಪಾಲಿಕೆಯಿಂದ ಆಹ್ವಾನ ಬರುತ್ತಿದ್ದಂತೆ ಸಂತೋಷದಿಂದ ಒಪ್ಪಿಕೊಂಡಿದ್ದು, ಸ್ವಚ್ಛತಾ ಕಾರ್ಯಗಳಲ್ಲಿ ಪಾಲಿಕೆ ಜೊತೆ ಕೈ ಜೋಡಿಸುವುದಾಗಿ ತಿಳಿಸಿದರು. ಈ ಕುರಿತು ಮಾತನಾಡಿದ ಮಂಡ್ಯ ರಮೇಶ್ ʼಮೈಸೂರು ಅಂದ್ರೆ ನಮಗೂ, ನಿಮಗೂ ಎಲ್ಲರಿಗೂ ಇಷ್ಟ. ಯಾಕಂದ್ರೆ ಅದರ ಕಲಾತ್ಮಕತೆ, ಪರಂಪರೆ, ಸ್ವಚ್ಛ-ಸುಂದರ ಪರಿಸರ ಎಲ್ಲರನ್ನೂ ಆಕರ್ಷಿಸುತ್ತದೆ. ಪ್ರಪಂಚರ ಎಲ್ಲಾ ಮೂಲೆಗೂ ಮೈಸೂರಿನ ಬಗ್ಗೆ ಗೊತ್ತು. ಹೆಸರೇಳಿದರೆ ಸಾಕು ವಿದೇಶಿಗರೂ ಹುಬ್ಬೇರಿಸುವಂತಹ ಇತಹಾಸ ಮೈಸೂರಿಗಿದೆ ಎಂದರು. ಹಾಗಾಗಿ ಈ ಊರು ದೇಶದ ಪ್ರಥಮ ಸ್ವಚ್ಛ, ಸುಂದರ ನಗರ ಎಂಬ ಹೆಸರು ಪಡೆದುಕೊಳ್ಳಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
2015-16ರಲ್ಲಿ ಸತತ ಎರಡು ಬಾರಿಯೂ ಸ್ವಚ್ಛತಾ ನಗರಗಳ ಪಟ್ಟಿಯಲ್ಲಿ ಸಾಂಸ್ಕೃತಿಕ ನಗರಿ ಹೆಸರು ಮಾಡಿತ್ತು. 2021ರಲ್ಲಿ 11ನೇ ಸ್ಥಾನಕ್ಕಿಳಿದು, ಪಟ್ಟಯಿಂದ ಹೊರಗುಳಿದಿತ್ತು. ಪುನಃ 2022ರಲ್ಲಿ ಎಂಟನೇ ಸ್ಥಾನ ದಕ್ಕಿಸಿಕೊಂಡಿದ್ದು, ಶತಾಯಗತಾಯ ಈಗ ನಂಬರ್ ಒನ್ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದೆ.