ಹೊಸದಿಗಂತ ಡಿಜಿಟಲ್ ಡೆಸ್ಕ್:
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದು ಬಂದರು ನಗರಿ ಮಂಗಳೂರಿನಿಂದ ಗೋವಾ ಮಡ್ಗಾಂವ್‌ಗೆ ತನ್ನ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಈ ಮೂಲಕ ಕರಾವಳಿ ಭಾಗದ ಬಹುನೀರಿಕ್ಷಿತ ಕನಸನ್ನು ನನಸು ಮಾಡಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿದ್ದು, ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರು, ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ರೈಲು ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟಿದ್ದು, ಮಧ್ಯಾಹ್ನ 1:15ರ ವೇಳೆಗೆ ಮಡ್ಗಾಂವ್ ತಲುಪುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 1:45ಕ್ಕೆ ಮಡ್ಗಾಂವ್‌ನಿಂದ ಮತ್ತೆ ಹೊರಡಲಿರುವ ರೈಲು, ಸಂಜೆ 6:30ರ ವೇಳೆಗೆ ಮಂಗಳೂರು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಮಂಗಳೂರು ಗೋವಾ ನಡುವೆ ಓಡಾಟ ನಡೆಸಲಿದೆ.