ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಗಳೂರಿನ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಭಾನುವಾರ ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಡೆದಿದೆ.
ಸ್ಕೂಟರ್‌ನ್ನುಮಾಲಕ ಚಾರ್ಜ್‌ಗೆ ಇಟ್ಟಿದ್ದರು. ಆದರೆ ಚಾರ್ಜ್‌ಗೆ ಇರಿಸಿದ ಕೆಲವೇ ಗಂಟೆಯಲ್ಲಿ ಸ್ಕೂಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತತ್‌ಕ್ಷಣ ಸ್ಕೂಟರ್ ಸ್ಪೋಟಗೊಂಡಿದೆ.
ಮಾಹಿತಿ ತಿಳಿದ ಅಗ್ನಿಶಾಮಕ ದಳ ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸವನ್ನು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಇಂತಹ ಘಟನೆಗಳಿಂದ ಎಲೆಕ್ಟ್ರಿಕ್ ವಾಹನ ಸವಾರರಲ್ಲಿ ಆತಂಕ ಮನೆಮಾಡಿದೆ.