Wednesday, November 5, 2025

FOOD | ಮಂಗಳೂರು ಸ್ಟೈಲ್ ಮಶ್ರೂಮ್ ಪೆಪ್ಪರ್ ಡ್ರೈ: ತುಂಬಾನೇ ರುಚಿಯಾಗಿರುತ್ತೆ, ಟ್ರೈ ಮಾಡಿ

ಮಂಗಳೂರು ಊಟ ಅಂದರೆ ಸ್ಪೆಷಲ್ ಮಸಾಲೆಯ ರುಚಿ, ತೆಂಗಿನ ಕಾಯಿ ಸುವಾಸನೆ, ಮತ್ತು ಮೆಣಸಿನ ಘಾಟು ಈ ಮೂರು ಸೇರಿ ಬಾಯಲ್ಲಿ ನೀರೂರಿಸುವ ಅನುಭವ ಕೊಡುತ್ತವೆ. ಆ ರೀತಿಯದೇ ಒಂದು ಡಿಶ್ ಅಂದರೆ ಮಂಗಳೂರು ಸ್ಟೈಲ್ ಮಶ್ರೂಮ್ ಪೆಪ್ಪರ್ ಡ್ರೈ! ಇದು ಸಿಂಪಲ್ ಆಗಿ ಮಾಡುವಂತದ್ದು, ಆದರೆ ಅದರ ರುಚಿ ರೆಸ್ಟೋರೆಂಟ್ ಸ್ಟೈಲ್ ಆಗಿರುತ್ತದೆ. ಇದನ್ನು ರೈಸ್, ರೋಟಿ ಜೊತೆಗೆ ತಿನ್ನಬಹುದು.

ಬೇಕಾಗುವ ಪದಾರ್ಥಗಳು:

ಮಶ್ರೂಮ್ – 200 ಗ್ರಾಂ
ಈರುಳ್ಳಿ – 1
ಹಸಿಮೆಣಸು – 2
ಕರಿ ಮೆಣಸು ಪುಡಿ – 1 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಕರಿಬೇವು – ಕೆಲವು
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 2 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕರಿಬೇವು, ಹಸಿಮೆಣಸು ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಬಂಗಾರದ ಬಣ್ಣ ಬಂದ ಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈಗ ಅದಕ್ಕೆ ಮಶ್ರೂಮ್ ತುಂಡುಗಳನ್ನು ಸೇರಿಸಿ, ಸ್ವಲ್ಪ ಉಪ್ಪು ಹಾಗೂ ಅರಿಶಿನ ಹಾಕಿ ಮಿಕ್ಸ್ ಮಾಡಿ.

ಮಶ್ರೂಮ್ ನೀರು ಬಿಟ್ಟು ಆರಿಹೋಗುವವವರೆಗೆ ಮಧ್ಯಮ ತಾಪದಲ್ಲಿ ಹುರಿಯಿರಿ. ಕೊನೆಗೆ ಕರಿ ಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 2 ನಿಮಿಷ ಹುರಿದು, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

error: Content is protected !!