ಮಂಗಳೂರು ಶೂಟೌಟ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಮಹಾರಾಷ್ಟ್ರದಲ್ಲಿ ಬಂಧನ

 ಹೊಸ ದಿಗಂತ ವರದಿ,ಮಂಗಳೂರು:

ಶೂಟೌಟ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಕರಾಡ್ ನ ಗಣೇಶ್ ಲಕ್ಷ್ಮಣ್ ಸಕಟ್ ಬಂಧಿತ.

ಬಿಜೈ ಭಾರತಿ ಬಿಲ್ಡರ್ಸ್ ಕಚೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು ನಡೆಸಿದ ಶೂಟ್ಔಟ್ ಗೆ ಸಂಬಂದಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾಗಿದ್ದ, ಗಣೇಶ್ ಲಕ್ಷ್ಮಣ್ ನ್ಯಾಯಾಲಯಕ್ಕೆ ಹಾಜರಾಗದೆ 2015 ರಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ಮಂಗಳೂರಿನ ಜೆಎಂಎಫ್ ಸಿ 3ನೇ ನ್ಯಾಯಾಲಯ ವಾರಂಟ್ ಹೊರಡಿಸಿದ್ದು, ಈತನನ್ನು ಮಹಾರಾಷ್ಟ್ರ ರಾಜ್ಯದ ಪಂಡರಾಪುರ ಎಂಬಲ್ಲಿ ಉರ್ವ ಪೊಲೀಸ್ ಠಾಣಾ ನಿರೀಕ್ಷಕರ ತಂಡ ಎಎಸ್ಐ ವೇಣುಗೋಪಾಲ್, ಸಿಬ್ಬಂಧಿಗಳಾದ ಪ್ರಮೋದ್, ನಾರಾಯಣ, ಗೋವಿಂದರಾಜ್ ಅವರು ದಸ್ತಗಿರಿ ಮಾಡಿ ಭಾನುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈತ ಕಾವೂರು ಪೊಲೀಸು ಠಾಣಾ ಅಪರಾಧ
ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಆತನ ವಿರುದ್ದ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಈತನ ವಿರುದ್ದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆ ಕರಾಡ್ ನಲ್ಲಿಯೂ ಆರ್ಮ್ಸ ಆ್ಯಕ್ಟ್ ಪ್ರಕರಣವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!