ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ ಎದುರಾಗಿದ್ದು, ಈಗಾಗಲೇ 21 ಮಂದಿಗೆ ಸೋಂಕು ತಗುಲಿದೆ.
ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿದ್ದು, ಬುಧವಾರ ಒಂದೇ ದಿನ 16 ಪ್ರಕರಣಗಳು ಕಾಣಿಸಿವೆ. ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಸೋಂಕು ಹೆಚ್ಚುವ ಭೀತಿ ಎದುರಾಗಿದ್ದು, ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುವಂತಾಗಿದೆ.
ಸದ್ಯ ಮಂಗನಕಾಯಿಲೆಗೆ ಯಾವುದೇ ವ್ಯಾಕ್ಸಿನ್ ಇಲ್ಲ, ಮುಂಜಾಗ್ರತಾ ಕ್ರಮವೊಂದೇ ದಾರಿ ಎಂದು ವೈದ್ಯರು ಹೇಳಿದ್ದಾರೆ. ಈ ವೈರಸ್‌ಗಳು ಒಣ ವಾತಾವರಣದಲ್ಲಿ ಹೆಚ್ಚು ದಿನ ಜೀವಿಸುವ ಶಕ್ತಿ ಹೊಂದಿವೆ ಎನ್ನಲಾಗಿದೆ.