ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ, ಜೊಯಿಡಾ, ಶಿರಸಿ ಹಾಗೂ ಅಂಕೋಲಾ ಸೇರಿದಂತೆ ಒಟ್ಟು ಐದು ತಾಲ್ಲೂಕುಗಳಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಐದೂ ತಾಲ್ಲೂಕುಗಳಲ್ಲಿ ಮಂಗನಕಾಯಿಲೆ ಹರಡುವುದನ್ನು ತಡೆಗಟ್ಟಲು ಕಳೆದ ಜುಲೈ ತಿಂಗಳಿನಿಂದಲೇ ಆರೋಗ್ಯ ಇಲಾಖೆಯು ವಿವಿಧ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಎಫ್‌ಡಿ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಅವರು, ಬಾಧಿತ ತಾಲ್ಲೂಕುಗಳ ಪ್ರತಿ ಮನೆಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುತ್ತಿದ್ದಾರೆ. ಕಾಯಿಲೆ ಹರಡುವ ಬಗ್ಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:
ಮಂಗನಕಾಯಿಲೆ ಹರಡಲು ಕಾರಣವಾಗುವ ಉಣ್ಣೆಗಳ ಕಡಿತದಿಂದ ರಕ್ಷಿಸಿಕೊಳ್ಳಲು ಸುಮಾರು 21,000 ಮನೆಗಳಿಗೆ ವಿಶೇಷ ತೈಲವನ್ನು ವಿತರಿಸಲಾಗುತ್ತಿದೆ. ಅರಣ್ಯ ಪ್ರದೇಶಕ್ಕೆ ತೆರಳುವವರು ಈ ತೈಲವನ್ನು ಹಚ್ಚಿಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.



