ಸಾಮಾಗ್ರಿಗಳು
ಮಾವಿನ ಹಣ್ಣು
ಹಾಲಿನ ಪುಡಿ
ಮಿಲ್ಕ್ ಮೇಡ್
ವಿಪ್ಪಿಂಗ್ ಕ್ರೀಂ
ಮಾಡುವ ವಿಧಾನ
ಮಾವಿನ ಹಣ್ಣಿನ ಸಿಪ್ಪೆ ಸುಲಿದು ತಿರುಳನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿಕೊಳ್ಳಿ. ನಂತರ ಅದನ್ನು 2 ಕಪ್ ಆಗುವಷ್ಟು ಪೇಸ್ಟ್ ರೀತಿ ಮಾಡಿ, ಅದಕ್ಕೆ ಅರ್ಧ ಕಪ್ ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮಿಕ್ಸ್ ಮಾಡುವಾಗ ಅದು ಗಂಟು ಕಟ್ಟಬಾರದು. ಅದಕ್ಕೆ ಅರ್ಧ ಕಪ್ ಮಿಲ್ಕ್‌ಮೇಡ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿಡಿ.
ನಂತರ ವಿಪ್ಪಿಂಗ್ ಕ್ರೀಮ್ ಹಾಕಿ 6-7 ನಿಮಿಷ ಕದಡಬೇಕು. ತುಂಬಾ ಮೃದುವಾದ ಮೇಲೆ ಕದಡಬಾರದು. ವ್ಹಿಪ್ಪಿಂಗ್ ಕ್ರೀಮ್‌ನ್ನು ಮಾವಿನಹಣ್ಣಿನ ಮಿಶ್ರಣದ ಜೊತೆಗೆ ಹಾಕಿ ಹಗುರ ಮಿಕ್ಸ್ ಮಾಡಬೇಕು. ಬಳಿಕ ಕ್ರೀಮ್ ರೀತಿಯಾದಾಗ ಮೆಟಲ್ ಟ್ರೇಗೆ ಹಾಕಿ 4 ಗಂಟೆ ಕಾಲ ಇಡಬೇಕು. ಬಳಿಕ ತೆಗೆದು ಮತ್ತೆ 8 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನಬಹುದು.