ಸಹಜ ಸ್ಥಿತಿಯತ್ತ ಮಣಿಪುರ: ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಅಮಿತ್ ಶಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮೆರಿಕ ಮತ್ತು ಈಜಿಪ್ಟ್‌ ಪ್ರವಾಸ ಮುಗಿಸಿ ವಾಪಾಸ್ ಆದ ಪ್ರಧಾನಿ ಮೋದಿ ಇಂದು ಕ್ಯಾಬಿನೇಟ್ ಸಭೆ ನಡೆಸಿದ್ದು, ಈ ವೇಳೆ ಗೃಹ ಸಚಿವ ಅಮಿತ್ ಶಾ ಸಹಜ ಸ್ಥಿತಿಗೆ ಮರಳಲು ಮಣಿಪುರ (Manipur) ಸರ್ಕಾರ ಮತ್ತು ಕೇಂದ್ರವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ ದೆಹಲಿಯ ಮನೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಣಿಪುರದಲ್ಲಿನ ಪ್ರಸ್ತುತ ಪರಿಸ್ಥಿತಿ ವರದಿಯನ್ನು ಸಲ್ಲಿಸಿದ ಒಂದು ದಿನದ ನಂತರ ಶಾ ವಿವರಣೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂಸಾಚಾರವನ್ನು ಬಹುತೇಕ ನಿಯಂತ್ರಿಸಲು ಸಮರ್ಥವಾಗಿವೆ ಎಂದು ಶಾ ಹೇಳಿದ್ದು, ಎಲ್ಲ ರೀತಿಯ ನೆರವು ನೀಡುವುದಾಗಿ ಮಣಿಪುರ ಸಿಎಂಗೆ ಭರವಸೆ ನೀಡಿದ್ದಾರೆ.

ಶನಿವಾರ 18 ರಾಜಕೀಯ ಪಕ್ಷಗಳು ಭಾಗವಹಿಸಿದ್ದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ಶಾ ವಹಿಸಿದ್ದರು. ರಾಜ್ಯದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ‘ಕಾಲಮಿತಿ ಕ್ರಿಯಾ ಯೋಜನೆ’ಯನ್ನು ಜಾರಿಗೆ ತರಬೇಕು ಎಂದು ಸಭೆಯಲ್ಲಿ ಪಕ್ಷದ ಪ್ರತಿನಿಧಿಗಳು ಒತ್ತಾಯಿಸಿದರು. ಹಿಂಸಾಚಾರ ಪೀಡಿತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಮೊದಲ ದಿನದಿಂದ ಪ್ರಧಾನಿಯವರು ಗಮನಿಸುತ್ತಿದ್ದು, ಪೂರ್ಣ ಸೂಕ್ಷ್ಮತೆಯಿಂದ ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!