ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಮೈಥಿ–ಕುಕಿ ಸಮುದಾಯಗಳ ನಡುವಿನ ಘರ್ಷಣೆಯ ವೇಳೆ ಅಪಹರಣಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಬುಡಕಟ್ಟು ಸಮುದಾಯದ ಯುವತಿ ಇಂಫಾಲದಲ್ಲಿ ಸಾವನ್ನಪ್ಪಿದ್ದಾರೆ.
ಆ ಭೀಕರ ದೌರ್ಜನ್ಯದಿಂದ ಉಂಟಾದ ದೈಹಿಕ ಗಾಯಗಳು ಮತ್ತು ಆಳವಾದ ಮಾನಸಿಕ ಆಘಾತದಿಂದ ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗದೆ ಕೊನೆಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕುಟುಂಬದವರ ಪ್ರಕಾರ, ಆಕೆ ಬದುಕುಳಿದರೂ ತೀವ್ರವಾದ ದೈಹಿಕ ಸಮಸ್ಯೆಗಳು, ಗಂಭೀರ ಗರ್ಭಾಶಯ ಸಂಬಂಧಿತ ತೊಂದರೆಗಳು ಮತ್ತು ನಿರಂತರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರಲಿಲ್ಲ. ಜನವರಿ 10, 2026ರಂದು ಆಕೆ ಮೃತಪಟ್ಟಿದ್ದಾರೆ ಎಂದು ಐಟಿಎಲ್ಎಫ್ ಮಾಹಿತಿ ನೀಡಿದೆ.
ನ್ಯಾಯ ಸಿಗದೆ ಮಗಳು ಸಾವನ್ನಪ್ಪಿರುವುದು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


