ಮಣಿಪುರ ಹಿಂಸಾಚಾರ: 87 ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಜನಾಂಗೀಯ ಹಿಂಸೆಗೆ ಬಲಿಯಾದ 87 ಜನರ ಮೃತದೇಹಗಳ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಲಾಗಿದೆ.

ಝೋ-ಕುಕಿ ಸಂತ್ರಸ್ತರು ಮೇ.೩ರಂದು ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾಗಿದ್ದರು. ಇಲ್ಲಿಯವರೆಗೂ ಅವರ ಮೃತದೇಹಗಳನ್ನು ಶವಗಾರಾದಲ್ಲಿಯೇ ಇಡಲಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಇಂಫಾಲ್‌ನ ನಾನಾ ಶವಾಗಾರಗಳಿಂದ 41 ಶವಗಳನ್ನು ವಿಮಾನದ ಮೂಲಕ ತರಲಾಗಿತ್ತು. 46 ಮೃತದೇಹಗಳನ್ನು ಚುರಂದಪುರದ ಜಿಲ್ಲಾ ಆಸ್ಪತ್ರೆಯಿಂದ ತರಲಾಗಿತ್ತು. ಕೋರ್ಟ್ ನಿರ್ದೇಶನದಂತೆ ಸಾಂಗ್ಪಿ ಜಿಲ್ಲೆಯ ಸೆಹ್ಕೆನ್ ಪ್ರದೇಶದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆದಿದೆ.

ಮೃತರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮವರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಶವಗಳಲ್ಲಿ ಒಂದು ತಿಂಗಳ ಮಗುವಿನ ಶವವೂ ಇದ್ದು ಕರುಳುಹಿಂಡುವ ಪರಿಸ್ಥಿತಿ ಎದುರಾಗಿತ್ತು.

ತಮ್ಮ ಸಂಬಂಧಿಗಳೇ ಅಲ್ಲದಿದ್ದರೂ ಸಾಕಷ್ಟು ಮಂದಿ ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಕಣ್ಣೀರಿಟ್ಟಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಜನರನ್ನು ಹುಡುಕಿಕೊಂಡು ಹೋಗಿ ಮನೆಯಲ್ಲೇ ಕೊಲ್ಲಲಾಗಿತ್ತು. ಮನೆಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!