ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಕೇಂದ್ರ, ಮಣಿಪುರ ಸರ್ಕಾರದಿಂದ ವರದಿ ಕೇಳಿದ ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್ ನಡೆಸಿದ್ದು, ಈ ವೇಳೆ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರಕ್ಕೆ ಮಹತ್ವದ ಸೂಚನೆಗಳನ್ನು ನೀಡಿದೆ.

ಸಂತ್ರಸ್ತ ಮಹಿಳೆಯರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಸಂಬಂಧ ಸರ್ಕಾರ ಕೈಗೊಂಡ ಕ್ರಮಗಳ ವರದಿ ನೀಡಲು ಸೂಚನೆ ನೀಡಿದೆ.

ಈವರೆಗೆ ನಡೆಸಿರುವ ತನಿಖಾ ವರದಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.ಈವರೆಗೂ 6,000 ಎಫ್‌ಐಆರ್ ವಿವರಗಳನ್ನ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಅಧಿಕಾರಿಗಳು ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಅನ್ನೋ ಮಾಹಿಯೂ ಬೇಕು. ದಾಖಲಾಗಿರುವ 6,000 FIRಗಳ ವಿಭಜನೆ ಮಾಡಬೇಕು. ಅದರಲ್ಲಿ ಎಷ್ಟು ಶೂನ್ಯ ಎಫ್‌ಐಆರ್ ದಾಖಲಾಗಿವೆ? ಎಷ್ಟು ಜನರ ಬಂಧನವಾಗಿದೆ? ಎಷ್ಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ? ಎಷ್ಟು ಮಂದಿ 156(3), ಎಷ್ಟು ಸೆಕ್ಷನ್ 164 ಹೇಳಿಕೆಗಳನ್ನ ದಾಖಲಿಸಲಾಗಿದೆ? ಎಂಬ ಮಾಹಿತಿ ಬೇಕು ಎಂದು ಸಿಜೆಐ ಚಂದ್ರಚೂಡ್ ನಿರ್ದೇಶಿಸಿದ್ದಾರೆ.

ಎಲ್ಲ ಮಾಹಿತಿಯನ್ನ ಆಗಸ್ಟ್‌ 1ರಂದು ಕೋರ್ಟ್‌ಗೆ ನೀಡಬೇಕು ಎಂದು ಸೂಚಿಸಿದರು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿವರಗಳನ್ನ ನೀಡಲು ಹೆಚ್ಚಿನ ಸಮಯವನ್ನ ಕೋರಿದರು. ಆದ್ರೆ ನ್ಯಾಯಾಲಯವು ನಿರಾಕರಿಸಿತು.

ಪ್ರಕರಣದ ಬಗ್ಗೆ ಎಸ್‌ಐಟಿ ರಚನೆ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯವನ್ನ ಸುಪ್ರೀಂಕೋರ್ಟ್ ಕೇಳಿದೆ. ಎಸ್‌ಐಟಿ ರಚನೆ ಅಂತಿಮವಾದ್ರೆ ಯಾರನ್ನ ಸೇರ್ಪಡೆ ಮಾಡಬಹುದು? ಒಳ್ಳೆಯ ಹೆಸರುಗಳಿದ್ದರೆ ತಿಳಿಸಿ, ನಾವು ಆ ಹೆಸರುಗಳನ್ನು ಪರಿಶೀಲಿಸಬೇಕು ಎಂದು ಪೀಠ ಹೇಳಿ, ವಿಚಾರಣೆಯನ್ನ ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!