ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ಅಗ್ನಿಪಥ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಅಗ್ನಿಪಥ ವಿರುದ್ಧ ಪ್ರತಿಭಟನಾ ಪತ್ರದಲ್ಲಿ ಸಹಿ ಹಾಕಲು ಕಾಂಗ್ರೆಸ್ ಪ್ರಮುಖ ನಾಯಕ ಮನೀಶ್ ತಿವಾರಿ ನಿರಾಕರಿಸಿದ್ದಾರೆ. ಇದರಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಸಂಸದೀಯ ಸಮಿತಿ ಮುಂದೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸಮಿತಿಗೆ ಪತ್ರ ನೀಡಿದೆ. ಆದರೆ ಈ ಪತ್ರಕ್ಕೆ ಸಹಿ ಹಾಕಲು ಮನೀಶ್ ತಿವಾರಿನಿರಾಕರಿಸಿದ ಘಟನೆ ನಡೆದಿದೆ. ಈ ಮೂಲಕ ಕಾಂಗ್ರೆಸ್ ನಡೆಸುತ್ತಿರುವ ಅಗ್ನಿಪಥ ಯೋಜನೆ ವಿರುದ್ದ ಪ್ರತಿಭಟನೆಗೆ ತಮ್ಮ ಸಹಕಾರ ಇಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಮನೀಶ್ ತಿವಾರಿ ನಡೆಗಳು ಈಗಾಗಲೇ ಕೆಲ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದೀಗ ಅಗ್ನಿಪಥ ಯೋಜನೆ ಕುರಿತು ಮನೀಶ್ ತಿವಾರಿಯ ನಿರ್ಧಾರ ಕೂಡ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡುಮಾಡಿದೆ. ಕಾಂಗ್ರೆಸ್ ಹಲವು ನಾಯಕರು ಅಗ್ನಿಪಥ ಬೆಂಬಲಿಸಿದ್ದಾರೆ.