ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾನಪದ ಹಾಡುಗಳ ಮೂಲಕ ಜನತೆಯ ಮನ ಗೆದ್ದಿದ್ದ ಮಂಜುನಾಥ್ ಸಂಗಳದ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹುಬ್ಬಳ್ಳಿಯ ತಾರಿಹಾಳದ ಮಂಜುನಾಥ್ ಸಂಗಳದಗೆ ನಿನ್ನೆ(ಏ.12) ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಮಂಜುನಾಥ್ ಸಂಗಳದ ಅವರನ್ನು ಹುಬ್ಬಳ್ಳಿ ಆಸ್ಪ್ರತೆಗೆ ದಾಖಲಿಸಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ತಪಾಸಣೆ ನಡೆಸಿದ ವೈದ್ಯರು ಮುಂಜುನಾಥ್ ಸಂಗಳದ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ.
ಮುಂಜನಾಥ್ ಸಂಗಳದ ದಿಢಿರ್ ಸಾವು ಹಲವರಿಗೆ ಆಘಾತ ತಂದಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ತಾಣಗಳಲ್ಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.