ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರ ಪಾಲಿಗೆ ಪ್ರತಿ ಹುಣ್ಣಿಮೆ ಪ್ರತಿ ಅಮವಾಸ್ಯೆ ಒಂದು ಹಬ್ಬವೇ ಸರಿ. ಅಮವಾಸ್ಯೆಗಳಲ್ಲಿ ಪ್ರಮುಖವಾದ ಮಣ್ಣೆತ್ತಿನ ಅಮವಾಸ್ಯೆಯನ್ನು ಪ್ರತಿವರ್ಷ ಜ್ಯೇಷ್ಠ ಅಮವಾಸ್ಯೆಯಂದು ನಾಡಿನಾದ್ಯಂತ ಆಚರಿಸಲಾಗುತ್ತದೆ.
ಕೃಷಿ ಕಾಯಕದಲ್ಲಿ ರೈತನ ನೇಗಿಲಿಗೆ ಹೆಗಲೊಡ್ಡಿ ಭೂಮಿ ಊಳಲು ಸಹಕಾರಿಯಾಗುವ ಎತ್ತುಗಳನ್ನು ಪೂಜಿಸುವ ದಿನವಿದು. ಮನೆಗೆ ಮಣ್ಣಿನ ಹಾಗೂ ವಿವಿಧ ಬಣ್ಣಗಳಿಂದ ಅಲಂಕೃತಗೊಂಡ ಎತ್ತುಗಳನ್ನು ತಂದು ಪೂಜಿಸಲಾಗುತ್ತದೆ. ವಾಸ್ತವವಾಗಿ ಪ್ರಸ್ತುತ ಆಧುನಿಕದ ಯಂತ್ರೋಪಕರಣಗಳ ಆವಿಷ್ಕಾರದಿಂದ ಕೃಷಿ ಚಟುವಟಿಕೆಯಲ್ಲಿ ಎತ್ತುಗಳ ಬಳಕೆ ಕೊಂಚ ಕಡಿಮೆ ಆದರೂ, ತಲೆಮಾರುಗಳಿಂದ ಆಚರಿಸಿಕೊಂಡು ಬಂದ ಹಬ್ಬವನ್ನು ಕೃಷಿಕರು ಹಾಗೂ ಜನತೆ ಆಚರಿಸುತ್ತಲೇ ಇದ್ದಾರೆ.
ಮಣ್ಣಿನ ಎತ್ತುಗಳ ಜೊತೆಗೆ ಮನೆಯಲ್ಲಿರುವ ಎತ್ತುಗಳಿಗೂ ವಿಶೇಷ ಪೂಜೆ ನಡೆಯುತ್ತದೆ. ತಮ್ಮ ಪ್ರತಿ ಕಾಯಕದಲ್ಲಿ ನೆರವಾಗುವವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸುವುದು ಭಾರತೀಯರ ಜನ್ಮಜಾತ ಸಂಸ್ಕೃತಿ, ಅಂತಃ ಸಾಲಿಗೆ ಮಣ್ಣೆತ್ತಿನ ಅಮವಾಸ್ಯೆಯೂ ಸೇರಿಕೊಳ್ಳುತ್ತದೆ.