ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಸರಕನ್ನು ಮಾರುಕಟ್ಟೆಗೆ ತರಬೇಕಾದರೆ ಮೊದಲು ವಾಹನಗಳಿಗೆ ತುಂಬಬೇಕು. ಇದು ಬಹಳ ಕೆಲಸದ ನೋಡಿ. ಸಾಮಾನ್ಯವಾಗಿ ವಾಹನದ ಮೇಲೊಬ್ಬರು ನಿಂತು ಕೆಳಗಿಂದ ಒಬ್ಬರು ಸಹಾಯ ಮಾಡುತ್ತಾ ಯಾವುದೇ ತರಕಾರಿ, ಹಣ್ಣು ಅಥವಾ ಇನ್ಯಾವುದೇ ವಸ್ತುಗಳನ್ನು ವಾಹನಗಳಿಗೆ ತುಂಬಿಸುತ್ತಾರೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಟೊಮ್ಯಾಟೊ ಹಣ್ಣನ್ನು ಲಾರಿಗೆ ತುಂಬಲು ಬಳಸಿದ ವಿಧಾನ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ಟಿಕ್ಟಾಕ್ನಲ್ಲಿ ವೈರಲ್ ಆದ ವೀಡಿಯೊವನ್ನು ಈಗ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ. ದೊಡ್ಡ ಲಾರಿಯೊಳಕ್ಕೆ ಬುಟ್ಟಿಯಲ್ಲಿ ತುಂಬಿದ್ದ ಟೊಮ್ಯಾಟೋ ಹಣ್ಣುಗಳನ್ನು ಎಸೆಯುತ್ತಿರುವ ಈತನ ಕೌಶಲ್ಯ ಯಾವ ಇಂಜಿನಿಯರ್ಗಳ ಟ್ಯಾಲೆಂಟ್ಗಿಂತ ಏನ್ ಕಡಿಮೆಯಿಲ್ಲ. ಗಾಳಿಯಲ್ಲಿ ಬಂದ ಬುಟ್ಟಿ ಒಂದು ಹಣ್ಣೂ ನೆಲಕ್ಕೆ ಬೀಳದಂತೆ ಲೋಡ್ ಆಗುತ್ತಿರುವ ದೃಶ್ಯವನ್ನು ನೀವೂ ನೋಡಿ.
Awesome skills. See how this person manages to throw tomatoes and buckets in opposite directions. Some engineering here!#EIIRInteresting #engineering #skills
Credit: Unknown, ViaWeb pic.twitter.com/wqMv4ElRUs— Pareekh Jain (@pareekhjain) October 18, 2022