Tuesday, January 13, 2026
Tuesday, January 13, 2026
spot_img

WEATHER | ಮಂಜಿನ ನಗರಿಯಾಗಲಿವೆ ಕರ್ನಾಟಕದ ಹಲವು ಜಿಲ್ಲೆಗಳು; ಚಳಿಯ ನಡುವೆ ಮಳೆಯ ಅಬ್ಬರ!

ರಾಜ್ಯದಲ್ಲಿ ಹವಾಮಾನ ಬದಲಾವಣೆಯ ಪರ್ವ ಆರಂಭವಾಗಿದ್ದು, ಜವವರಿ 14 ರವರೆಗೆ ಪ್ರಮುಖ ಬದಲಾವಣೆಗಳು ಕಂಡುಬರಲಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ದಟ್ಟ ಮಂಜು ಹಾಗೂ ಶೀತಗಾಳಿ ಆವರಿಸಲಿದ್ದು, ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದ ಹೊತ್ತಿಗೆ ವಾತಾವರಣದಲ್ಲಿ ಏರುಪೇರಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ವಿವಿಧೆಡೆ ಮಂಜಿನ ಮುಸುಕು ಇರಲಿದ್ದು, ಮೈ ನಡುಗಿಸುವ ಶೀತಗಾಳಿ ಬೀಸಲಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಜನತೆಗೆ ಮಳೆಯ ಅನುಭವವೂ ಆಗಲಿದೆ.

ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಲಿದ್ದು, ಮುಂಜಾನೆ ಮತ್ತು ಸಂಜೆ ತಂಪಾದ ಗಾಳಿ ಇರಲಿದೆ. ಚಿಕ್ಕಬಳ್ಳಾಪುರದಲ್ಲಿ ಚಳಿಯ ತೀವ್ರತೆ ಹೆಚ್ಚಿರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.

Most Read

error: Content is protected !!