Daily horoscope | ಈ ರಾಶಿಯವರಿಗೆ ತೆರೆಯಲಿದೆ ಇಂದು ಅವಕಾಶದ ಹಲವಾರು ಬಾಗಿಲು!

ಮೇಷ
ಒತ್ತಡದ ಬದುಕಿನಿಂದ ಇಂದು ನಿಮಗೆ ತುಸು ನಿರಾಳತೆ ದೊರಕಲಿದೆ. ಬಂಧುಮಿತ್ರರ ಜತೆ ಒಡನಾಟದ ಅವಕಾಶ. ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ.

ವೃಷಭ
ನಿಮ್ಮ ಮನಸ್ಥಿತಿ ಪದೇಪದೇ ಬದಲಾಗಬಹುದು ಸಂತೋಷ, ಬೇಸರ, ಸಿಟ್ಟು ಎಲ್ಲವನ್ನೂ ಇಂದು ಅನುಭವಿಸುವಿರಿ. ತಾಳ್ಮೆ ಅತೀ ಅವಶ್ಯ.

ಮಿಥುನ
ಪ್ರೀತಿ, ಸಂಬಂಧದ ವಿಚಾರದಲ್ಲಿ ನಿಮಗೆ ಇಂದು ಪೂರಕ ದಿನ. ಎಲ್ಲವೂ ನಿಮ್ಮ ಅಭೀಷ್ಟದಂತೆ ನಡೆಯುವುದು. ಮನಸ್ತಾಪ ನಿವಾರಣೆ.

ಕಟಕ
ವಿಭಿನ್ನ ಬದ್ಧತೆಗಳನ್ನು ಇಂದು ಪೂರೈಸಬೇಕಾದ ಒತ್ತಡ. ಕೊಟ್ಟ ಮಾತಿಗೆ ತಪ್ಪದಂತೆ ನೋಡಿಕೊಳ್ಳಿ. ಪಾಲುದಾರರ ಜತೆ ಹಣದ ವಿಚಾರದಲ್ಲಿ ವಾಗ್ವಾದ ಸಂಭವ.

ಸಿಂಹ
ಆತ್ಮೀಯರ ಜತೆ ಇದು ಭಿನ್ನಾಭಿಪ್ರಾಯ ಮೂಡುವುದು. ಇದು ದಿನದ ನೆಮ್ಮದಿ ಹಾಳು ಮಾಡುವುದು. ನಿಮ್ಮ ಕೋಪತಾಪ ನಿಯಂತ್ರಿಸಿ.

ಕನ್ಯಾ
ಸಂತೋಷ, ಉಲ್ಲಾಸದ ದಿನ. ನಿಮ್ಮ ಪ್ರಗತಿಗೆ ಹಲವಾರು ಅವಕಾಶದ ಬಾಗಿಲು ತೆರೆಯಲಿದೆ.ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೌಟುಂಬಿಕ ನೆಮ್ಮದಿ.

ತುಲಾ
ಕೆಲವರ ಸಲಹೆ ಇಂದು ನಿಮಗೆ ಅಪಥ್ಯ ಎನಿಸಬಹುದು.ಆದರೆ ಅವರ ಉದ್ದೇಶ ಒಳ್ಳೆಯದೆಂದು ಅರಿಯಿರಿ. ವೃಥಾ ಟೀಕೆ ಮಾಡದಿರಿ.

ವೃಶ್ಚಿಕ
ವಿಧೇಯರಾಗಿರುವುದು ಒಳ್ಳೆಯದು.ಆದರೆ ಇತರರು ತಮ್ಮ ತಾಳಕ್ಕೆ ನಿಮ್ಮನ್ನು ಕುಣಿಸಲು ಅವಕಾಶ ಕೊಡದಿರಿ.ಕೆಲವೊಮ್ಮೆ ಪ್ರತಿಭಟಿಸಿ ನಿಲ್ಲಬೇಕು.

ಧನು
ಹಣದ ವಿಚಾರದಲ್ಲಿ ಹೆಚ್ಚು ಎಚ್ಚರವಹಿಸಿ.ಅನವಶ್ಯ ವಿಚಾರಗಳಿಗೆ ದುಂದುವೆಚ್ಚ ಉಂಟಾದೀತು.ಕೌಟುಂಬಿಕ ಸಮಸ್ಯೆ ಪರಿಹಾರ, ನಿರಾಳತೆ.

ಮಕರ
ನಿಮ್ಮ ಖಾಸಗಿ ಬದುಕು ಮತ್ತು ಆರ್ಥಿಕ ವಿಚಾರದಲ್ಲಿ ಇಂದು ಪ್ರಗತಿ ಸಾಧಿಸುವಿರಿ. ಹಲವಾರು ವಿಷಯಗಳು ಇಂದು ನಿಮಗೆ ಉತ್ಸಾಹ ತುಂಬಲಿವೆ.

ಕುಂಭ
ಕುಟುಂಬದಲ್ಲಿ ಉದ್ವಿಗ್ನ ಸ್ಥಿತಿ ಉಂಟಾದೀತು. ಅದಕ್ಕೆ ನಿಮ್ಮ ವರ್ತನೆಯೂ ಕಾರಣವಾಗುವುದು. ಉಳಿದವರ ಭಾವನೆಗೆ ಬೆಲೆ ಕೊಡಿರಿ.

ಮೀನ
ನೀವು ನಿರೀಕ್ಷಿಸಿರದ ಬೆಳವಣಿಗೆ ಖಾಸಗಿ ಬದುಕಲ್ಲಿ ಉಂಟಾದೀತು. ಆದರೂ ಅದನ್ನು ನಿಭಾಯಿಸಲು ನಿಮಗೆ ಯಾವುದೇ ಸಮಸ್ಯೆಆಗದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!