ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 15 ರಂದು ಹಲವು ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬಂದು ಸೇರಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೀಪಾವಳಿ ನಂತರ ರಾಜ್ಯ ರಾಜಕಾರಣದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತೀರಿ, ನಮ್ಮ ಸಂಪರ್ಕದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಇದ್ದಾರೆ. ನವೆಂಬರ್ 15 ರವರೆಗೆ ಕಾದು ನೋಡಿ ಯಾರೆಲ್ಲ ಬಂದು ಸೇರುತ್ತಾರೆ ಎಂದಿದ್ದಾರೆ.
ಬಿಜೆಪಿಗೆ ರಾಜ್ಯದಲ್ಲಿ ಒಳ್ಳೆ ಪರಿಸ್ಥಿತಿ ಇಲ್ಲ, ಹೀಗಿರುವಾಗ ನಮ್ಮ ಪಕ್ಷದ ಯಾವ ಶಾಸಕರನ್ನೂ ಸೆಳೆಯೋಕೆ ಆಗೋದಿಲ್ಲ ಎಂದಿದ್ದಾರೆ.