ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಮರೈಸ್ ಎರಾಸ್ಮಸ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಮರೈಸ್ ಎರಾಸ್ಮಸ್ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎರಾಸ್ಮಸ್ ಅವರಿಗೆ ಕ್ರಿಕೆಟ್ ಅಂಪೈರ್ ಗಳ ಪ್ರತಿಷ್ಠಿತ ಪ್ರಶಸ್ತಿಯಾದ ಡೇವಿಡ್ ಶೆಫರ್ಡ್ ಟ್ರೋಫಿಯನ್ನು ಮೂರು ಬಾರಿ ನೀಡಿ ಗೌರವಿಸಲಾಗಿದೆ. ಎರಾಸ್ಮಸ್ ಮೂರು ಬಾರಿ (2016, 2017 ಮತ್ತು 2021 ರಲ್ಲಿ) ಐಸಿಸಿ ವರ್ಷದ ಅಂಪೈರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಐದು ಬಾರಿ ಪ್ರಶಸ್ತಿಯನ್ನು ಗೆದ್ದ ಆಸ್ಟ್ರೇಲಿಯಾದ ಸೈಮನ್ ಟೌಫೆಲ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಅತ್ಯುತ್ತಮ ಅಂಪೈರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಎರಾಸ್ಮಸ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ 2006 ರ ಟಿ 20ಐ ನಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಪುರುಷರ ಕ್ರಿಕೆಟ್ಗಾಗಿ 80 ಟೆಸ್ಟ್, 124 ಏಕದಿನ ಮತ್ತು 43 ಟಿ 20 ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ.