January19, 2026
Monday, January 19, 2026
spot_img

ಟ್ರಂಪ್‌ಗೆ ತಾನು ಗೆದ್ದ ನೊಬೆಲ್ ಶಾಂತಿ ಪ್ರಶಸ್ತಿ ಅರ್ಪಿಸಿದ ಮಾರಿಯಾ ಕೊರಿನಾ ಮಚಾದೊ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಹಾಗೂ ಪ್ರಜಾಪ್ರಭುತ್ವ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರು ದುಃಖಿತ ಜನರು ಹಾಗೂ ಪ್ರಜಾಪ್ರಭುತ್ವಪರ ಚಳವಳಿಗೆ ನಿರ್ಣಾಯಕ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

ನಾರ್ವೆಯ ನೊಬೆಲ್ ಸಮಿತಿಯಿಂದ 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ನಂತರ, ಮಚಾದೊ ಅವರು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. ವೆನೆಜುವೆಲಾದ ಜನರ ಹೋರಾಟಕ್ಕೆ ಈ ಜಾಗತಿಕ ಗುರುತಿಸುವಿಕೆಯು ನಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಹೊಸ ಶಕ್ತಿಯನ್ನು ನೀಡುತ್ತದೆ. ನಾವು ವಿಜಯದ ಹೊಸ್ತಿಲಲ್ಲಿದ್ದೇವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಮ್ಮ ಜೊತೆಯಾಗಿ ನಿಂತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲ್ಯಾಟಿನ್ ಅಮೆರಿಕದ ಜನತೆ ಮತ್ತು ಪ್ರಪಂಚದ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾನು ವೆನೆಜುವೆಲಾದ ಸಮಸ್ತ ಜನತೆಗೆ ಹಾಗೂ ನಮ್ಮ ಉದ್ದೇಶಕ್ಕೆ ನಿರ್ಣಾಯಕ ಬೆಂಬಲ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಜಾಗತಿಕ ಯುದ್ಧಗಳನ್ನು ತಡೆದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ತಾವೇ ಅರ್ಹರೆಂದು ಹೇಳಿಕೊಂಡಿದ್ದ ಡೊನಾಲ್ಡ್ ಟ್ರಂಪ್, ಪ್ರಶಸ್ತಿ ಕೈತಪ್ಪಿದ ನಂತರ ಅಸಮಾಧಾನಗೊಂಡಿದ್ದರು. ಶ್ವೇತಭವನವೂ ಪ್ರಶಸ್ತಿ ಪ್ರಕಟಣೆಯ ನಂತರ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಮಚಾದೊ ಅವರು ಪ್ರಶಸ್ತಿಯನ್ನು ಟ್ರಂಪ್ ಮತ್ತು ವೆನೆಜುವೆಲಾ ಜನತೆಗೆ ಅರ್ಪಿಸುವ ಮೂಲಕ ಟ್ರಂಪ್‌ಗಾಗಿ ಗೌರವದ ಕ್ಷಣವನ್ನು ಸೃಷ್ಟಿಸಿದರು.

Must Read