ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಖ್ಯಾತ ಚಿತ್ರಕಲಾವಿದ ಆಂಡಿ ವಾರ್ಹೋಲ್ ಅವರು ಬಿಡಿಸಿದ ಪ್ರಸಿದ್ಧ ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ಅವರ ವರ್ಣಚಿತ್ರವು ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 1,500 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ.
ಮರ್ಲಿನ್ ಮನ್ರೋ ಮರಣಿಸಿದ ಬಳಿಕ ಕಲಾವಿದ ವಾರ್ಹೋಲ್ 1962ರಲ್ಲಿ “ಶಾಟ್ ಸೇಜ್ ಬ್ಲೂ ಮರ್ಲಿನ್” ಎಂಬ ಚಿತ್ರಸರಣಿಯನ್ನು ಹೊರತಂದಿದ್ದರು. ಈ ಚಿತ್ರಗಳು ಸಾಕಷ್ಟು ಪ್ರಸಿದ್ಧಿಗಳಿಸಿತ್ತು, ಅಂತಹ ಸರಣಿ ಚಿತ್ರಗಳಲ್ಲಿ ಈ ಚಿತ್ರವೂ ಒಂದಾಗಿದೆ. ಅಲ್ಲದೇ, ಇದು ಈವರೆಗೆ ಮಾರಾಟವಾದ 20ನೇ ಶತಮಾನದ ಅತ್ಯಂತ ದುಬಾರಿ ವರ್ಣಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧953 ರ ಚಲನಚಿತ್ರ “ನಯಾಗರಾ” ದಲ್ಲಿನ ಮರ್ಲಿನ್ ಮನ್ರೋ ಪಾತ್ರದ ಪ್ರಭಾವದಲ್ಲಿ ಈ ಚಿತ್ರವನ್ನು ರಚಿಸಲಾಗಿದೆ. ಈ ಚಿತ್ರವು ಸ್ವಿಸ್ ಕಲಾ ವಿತರಕರಾದ ಥಾಮಸ್ ಮತ್ತು ಡೋರಿಸ್ ಅಮ್ಮನ್ ಅವರ ಸಂಗ್ರಹಣೆಯಲ್ಲಿತ್ತು.
ಆಗಸ್ಟ್ 4, 1962 ರಂದು ಲಾಸ್ ಏಂಜಲೀಸ್‌ನಲ್ಲಿರುವ ತನ್ನ ಮನೆಯಲ್ಲಿ ನಿಗೂಢವಾಗಿ ಸಾಯುವ ಮೊದಲು ಮನ್ರೋ ಹಾಲಿವುಡ್‌ನ ಅತ್ಯಂತ ಸುಪ್ರಸಿದ್ಧ ತಾರೆಗಳಲ್ಲಿ ಒಬ್ಬರಾಗಿದ್ದರು. ಕಲಾವಿದ ವಾರ್ಹೋಲ್ 1987 ರಲ್ಲಿ ನಿಧನರಾದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ