ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
2015 ರಿಂದ ಕೆನಡಾವನ್ನು ಮುನ್ನಡೆಸುತ್ತಿದ್ದ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಸ್ಥಾನದಿಂದ ಕೆಳಗಿದ ಬಳಿಕ ಇಂದು ಗೆ ಕಾರ್ನಿ ಒಟ್ಟಾವಾದಲ್ಲಿ ನಡೆದ ಸಮಾರಂಭದಲ್ಲಿ ಮಾರ್ಕ್ ಕಾರ್ನಿ ಪ್ರಮಾಣ ವಚನ ಸ್ವೀಕರಿಸಿದರು.
ಕೆನಡಾದ 24ನೇ ಪ್ರಧಾನಿ ಕಾರ್ನೆ ಮತ್ತು ಅವರ ಕ್ಯಾಬಿನೆಟ್ ಸಚಿವರ ಪ್ರಮಾಣ ವಚನ ಸ್ವೀಕಾರದ ಅಧ್ಯಕ್ಷತೆಯನ್ನು ಗವರ್ನರ್ ಜನರಲ್ ಮೇರಿ ಸೈಮನ್ ವಹಿಸಿದ್ದರು.
2008ರಿಂದ 2013ರವರೆಗೆ ಕೆನಡಾ ಬ್ಯಾಂಕ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರು, 2013ರಿಂದ 2020ರವರೆಗೆ ಇಂಗ್ಲೆಡ್ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2008ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಕೆನಡಾ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ. ಅಷ್ಟೇ ಅಲ್ಲದೇ, 1694ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಆಫ್ ಇಂಗ್ಲೆಂಡ್ ಮುನ್ನಡೆಸಿದ ಮೊದಲ ಬ್ರಿಟಿಷ್ ಹೊರತಾದ ವ್ಯಕ್ತಿಯೂ ಹೌದು.
ವಿಶ್ವಸಂಸ್ಥೆಯ ಹವಾಮಾನ ಮತ್ತು ಆರ್ಥಿಕತೆಯ ವಿಶೇಷ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ಕಾರ್ನಿ, ಗೋಲ್ಡ್‌ಮನ್ ಸ್ಯಾಚ್ಸ್ ಕಾರ್ಯನಿರ್ವಾಹಕರಾಗಿದ್ದಾರೆ. 2003ರಲ್ಲಿ ಬ್ಯಾಂಕ್ ಆಫ್ ಕೆನಡಾದ ಉಪ ಗವರ್ನರ್ ಆಗಿ ನೇಮಕವಾಗುವ ಮುನ್ನ ಲಂಡನ್, ಟೋಕಿಯೋ, ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.