ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಳಿಕಟ್ಟಿದರೆ ಮಾತ್ರ ಅದು ಮದುವೆಯಾಗುವುದಿಲ್ಲ, ಮದುವೆ ಶಾಸ್ತ್ರೋಕ್ತವಾಗಿ ನಡೆಯಬೇಕು, ಬಹುಮುಖ್ಯವಾಗಿ ಸಪ್ತಪದಿ ತುಳಿದಿರಬೇಕು ಎನ್ನುವ ಅಭಿಪ್ರಾಯವನ್ನು ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿದೆ.
ವಿಚ್ಛೇದನ ನೀಡದೇ ಪತ್ನಿ ಎರಡನೇ ಮದುವೆಯಾಗಿದ್ದಾಳೆ ಎಂದು ಪತಿ ಕೇಸ್ ಹಾಕಿದ್ದು, ಈ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಶಾಸ್ತ್ರಗಳಲ್ಲಿ ಮದುವೆಯ ಸಾರ ಅಡಗಿದೆ. ಶಾಸ್ತ್ರೋಕ್ತವಾದ ಮದುವೆ ಎಂದೇ ಹೇಳಲಾಗುತ್ತದೆ. ಸರಿಯಾದ ಆಚರಣೆ ಇಲ್ಲದ ಮದುವೆಯನ್ನು ಮದುವೆ ಎಂದು ಹೇಳಲು ಸಾಧ್ಯವಿಲ್ಲ.
ಶಾಸ್ತ್ರಗಳು ಅದರಲ್ಲೂ ಸಪ್ತಪದಿ ತುಳಿಯದೆ ಇದ್ದರೆ ಅದು ಕಾನೂನಿನ ಕಣ್ಣಿಗೆ ಮದುವೆಯಲ್ಲ ಎಂದು ಕೋರ್ಟ್ ಹೇಳಿದೆ. ಏಳು ಹೆಜ್ಜೆ ಒಟ್ಟಿಗೆ ನಡೆದಾಗ ಮಾತ್ರ ಮದುವೆ ಸಂಪನ್ನವಾಗುತ್ತದೆ ಎಂದು ಹೇಳಲಾಗಿದೆ.