ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಬರುವ ಭಕ್ತರಿಗಾಗಿ ನೀಡುವ ಅನ್ನ ಪ್ರಸಾದಕ್ಕೆ ಇದೀಗ ಮಸಾಲೆ ವಡಾ ಕೂಡ ಸೇರ್ಪಡೆಯಾಗಿದೆ.
ಟಿಟಿಡಿ ವಿಶ್ವಸ್ಥ ಮಂಡಳಿಯ ನಿರ್ಣಯದಂತೆ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದ ಮೆನುವಿನಲ್ಲಿ ಮಸಾಲೆ ವಡೆ ಸೇರ್ಪಡೆಯಾಗಿದೆ. ಸೋಮವಾರದಿಂದ ಭಕ್ತರಿಗೆ ಬಡಿಸಲು ಆರಂಭಿಸಿದರು.
ಮೊದಲ ದಿನ ಪ್ರಾಯೋಗಿಕವಾಗಿ ಐದು ಸಾವಿರ ವಡೆ ಬಡಿಸಲಾಯಿತು. ಇನ್ನೊಂದು ವಾರ ಪರಿಶೀಲನೆ ನಡೆಸಿ ಸಂಪೂರ್ಣ ಜಾರಿಯಾಗಲಿದೆ ಎಂದು ತಿಳಿಸಲಾಗಿದೆ.
ಅನೇಕ ಭಕ್ತರು ಅನ್ನಪ್ರಸಾದದ ಗುಣಮಟ್ಟ ಮತ್ತು ವಡೆ ಒದಗಿಸುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಇದೇ 10ರಿಂದ 19ರವರೆಗೆ ಶ್ರೀವಾರಿ ವೈಕುಂಠದ ಮೂಲಕ ಒಟ್ಟು 6.83 ಲಕ್ಷ ಮಂದಿ ದರುಶನ ಭಾಗ್ಯ ಪಡೆದರು.
ಪ್ರಾಯೋಗಿಕವಾಗಿ ಸೋಮವಾರ ಭಕ್ತಾದಿಗಳಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ತಯಾರಿಸಿದ 5000 ಮಸಾಲೆ ವಡಾಗಳನ್ನು ಬಡಿಸಲಾಯಿತು. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಒಂದು ವಾರದವರೆಗೆ ಜನರಿಂದ ಪ್ರತಿಕ್ರಿಯೆಯನ್ನು ಪಡೆದ ನಂತರ ‘ಅನ್ನಪ್ರಸಾದ’ ಮೆನುವಿನಲ್ಲಿ ಸೇರ್ಪಡೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಿದೆ.