ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜೆಯ ಹೊತ್ತಿಗೆ ಒಂದಷ್ಟು ಡಿಫರೆಂಟ್ ಆಗಿರುವ ರುಚಿ ರುಚಿಯಾದ ಅಣಬೆ ಶ್ಯಾವಿಗೆ ಉಪ್ಪಿಟ್ಟು ನೀವೂ ಮಾಡಬಹುದು. ಹಾಗಾದ್ರೆ ಇದನ್ನು ಹೇಗೆ ಮಾಡೋದು ನೋಡೋಣ್ವೇ.
ಬೇಕಾಗುವ ಸಾಮಾಗ್ರಿಗಳು:
150 ಗ್ರಾಂ ಶ್ಯಾವಿಗೆ, 100ಗ್ರಾಂ ತಾಜಾ ಅಣಬೆ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2ದೊಡ್ಡ ಈರುಳ್ಳಿ, ರುಚಿಗೆ ತಕ್ಕಷ್ಟು ಹುಡಿಉಪ್ಪು, ಚಿಟಿಕೆ ಮೆಣಸಿನ ಹುಡಿ, ಒಂದು ನಿಂಬೆಹಣ್ಣು, ಅರ್ಧ ಸೌಟು ತೆಂಗಿನೆಣ್ಣೆ.
ಹೀಗೆ ಮಾಡಿ: ಆರಂಭದಲ್ಲಿ ಶ್ಯಾವಿಗೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ನಂತರ ಅದೇ ಬಾಣೆಲೆಯಲ್ಲಿ ಎಣ್ಣೆ ಬಿಸಿಮಾಡಿ ಒಗ್ಗರಣೆಗಿಟ್ಟುಕೊಳ್ಳಿ. ಸಣ್ಣಗೆ ಹೆಚ್ಚಿದ ಈರುಳ್ಳಿ, ನಂತರ ಅಣಬೆ ಹಾಕಿ ಬೇಯಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿಕೊಳ್ಳಿ. ಉಪ್ಪು ಖಾರ ಹುಡಿ ಹಾಕಿ ಗೊಟಾಯಿಸಿ. ಅನಂತರ ಒಂದು ಲೋಟ ನೀರು ಹಾಕಿ ಕುದಿಯಲು ಇಡಿ. ಶ್ಯಾವಿಗೆ ಸೇರಿಸಿಕೊಳ್ಳಿ. ಮಂದ ಉರಿಯಲ್ಲಿ ನಿಧಾನವಾಗಿ ಬೇಯಿಸಿಕೊಳ್ಳಿ. ಎರಡು ನಿಮಿಷ ನಂತರ ಕೆಳಗಿಳಿಸಿ. ಹತ್ತು ನಿಮಿಷದ ನಂತರ ನಿಂಬೆ ರಸ ಹಿಂಡಿಕೊಂಡು ಸರ್ವ್ ಮಾಡಿ.