January19, 2026
Monday, January 19, 2026
spot_img

ತೈವಾನ್‌ನಲ್ಲಿ 7.0 ತೀವ್ರತೆಯ ಭಾರೀ ಭೂಕಂಪ: ಧರೆಗುರುಳಿದ ಬೃಹತ್‌ ಕಟ್ಟಡಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೈವಾನ್‌ನ ಈಶಾನ್ಯ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಯಿಲಾನ್ ನಗರ ಕೇಂದ್ರವಾಗಿ 7.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಭೂಮಿಯೊಳಗೆ ಸುಮಾರು 73 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಭೂಕಂಪನ ಮೇಲ್ವಿಚಾರಣಾ ಸಂಸ್ಥೆಗಳು ತಿಳಿಸಿವೆ.

ಭೂಕಂಪದ ತೀವ್ರತೆಯಿಂದ ರಾಜಧಾನಿ ತೈಪೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡಗಳು ತೀವ್ರವಾಗಿ ನಡುಗಿವೆ. ಕೆಲವೆಡೆ ಕಟ್ಟಡಗಳು ಹಾನಿಗೊಳಗಾಗಿರುವ ವರದಿಗಳೂ ಲಭ್ಯವಾಗಿವೆ. ಭೂಕಂಪದ ನಂತರ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳಿಗೆ ಧಾವಿಸಿದ್ದಾರೆ.

ಇದನ್ನೂ ಓದಿ:

ಘಟನೆಯ ತಕ್ಷಣವೇ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿ, ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭಿಸಿವೆ. ರಾಷ್ಟ್ರೀಯ ಅಗ್ನಿಶಾಮಕ ಇಲಾಖೆ ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಇದೇ ವಾರದ ಆರಂಭದಲ್ಲೇ ತೈವಾನ್‌ನಲ್ಲಿ 6.0 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಇದು ಒಂದೇ ವಾರದಲ್ಲಿ ಸಂಭವಿಸಿದ ಎರಡನೇ ಭೂಕಂಪವಾಗಿದ್ದು, ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Must Read