ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ರೋಹಿಣಿಯಲ್ಲಿರುವ ಪ್ರಶಾಂತ್ ವಿಹಾರ್ ಪ್ರದೇಶದ ಸಿಆರ್‌ಪಿಎಫ್ ಶಾಲೆಯ ಬಳಿ ಇಂದು ಬೆಳಗ್ಗೆ ನಿಗೂಢ ಸ್ಫೋಟ ಸಂಭವಿಸಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಿಂದ ಶಾಲೆಯ ಗೋಡೆ, ಸಮೀಪದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ.
ರೋಹಿಣಿಯ ಸೆಕ್ಟರ್ 14 ರಲ್ಲಿನ ಸಿಆರ್‌ಪಿಎಫ್ ಶಾಲೆಯ ಬಳಿ ಅಗ್ನಿಶಾಮಕ ಇಂಜಿನ್‌ಗಳು, ಬಾಂಬ್ ಸ್ಕ್ವಾಡ್‌ಗಳು ಮತ್ತು ಪೊಲೀಸ್ ಫೋರೆನ್ಸಿಕ್ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ, ದೊಡ್ಡ ಸ್ಫೋಟದ ಮೂಲವನ್ನು ಪತ್ತೆ ಹಚ್ಚಲಾಯಿತು. ಘಟನಾ ಸ್ಥಳಕ್ಕೆ ಕ್ರೈಂ ಬ್ರಾಂಚ್, ವಿಶೇಷ ದಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.