ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನೆಲಮಂಗಲದ ಜಿಯೋ ಮಾರ್ಟ್ ಗೋಡೌನ್ಗೆ ಬೆಂಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಬೆಂಕಿಯ ತೀವ್ರತೆಗೆ ಸಂಪೂರ್ಣ ಒಂದೂವರೆ ಎಕರೆಯಲ್ಲಿದ್ದ ಕಟ್ಟಡ ಹಾಗೂ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಅವಘಡದಿಂದ ನೆಲಮಂಗಲ ಹೆದ್ದಾರಿಯಲ್ಲಿ ಭಾರೀ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಗೋಡೌನ್ ಒಳಗೆ ತೆರಳಲು ಅಗ್ನಿಶಾಮಕ ಸಿಬ್ಬಂದಿ ಪರದಾಡಿದ್ದರು.
ಜೆಸಿಬಿ ಬಳಸಿ ಗೋಡೆಯನ್ನು ಒಡೆದು ಒಳಕ್ಕೆ ಹೋದ ಸಿಬ್ಬಂದಿ ಅಗ್ನಿ ನಂದಿಸಿದ್ದಾರೆ.ಸುಮಾರು 10 ಅಗ್ನಿಶಾಮಕ ವಾಹನ ಬಳಸಿ ರಾತ್ರಿ ಪೂರ್ತಿ ಹೋರಾಡಿ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.



