ಮಂಗಳವಾರ, 28 ಡಿಸೆಂಬರ್ 2021
ಮೇಷ
ಎಂದಿನ ಏಕತಾನತೆ ನೀಗಿಸಲು ಯತ್ನಿಸುವಿರಿ. ಕೆಲವರ ಸಂಗದಲ್ಲಿ ಹೊಸ ಹುರುಪು ಪಡೆಯುವಿರಿ. ಆದರೆ ಮನಸ್ಸು ಕೆಡಿಸುವ ಪ್ರಸಂಗವೂ ಉಂಟಾದೀತು.
ವೃಷಭ
ಕೆಲವು ಕಿರಿಕಿರಿಗಳು ಮನಸ್ಸು ಕಾಡುತ್ತವೆ. ಅದಕ್ಕೆ ಪರಿಹಾರ ಕಾಣಲಾಗದೆ ಅಸಹನೆ. ಕೆಲವರ ವರ್ತನೆ ಕೂಡ ನಿಮ್ಮ ತಾಳ್ಮೆ ಕೆಡಿಸಬಹುದು.
ಮಿಥುನ
ಸಮಸ್ಯೆಯೊಂದು ಪರಿಹಾರ ಕಂಡ ನಿರಾಳತೆ. ಆತ್ಮೀಯ ಬಂಧುವಿನ ಜತೆಗಿನ ಮುನಿಸು ನಿವಾರಣೆ. ಆಪ್ತರಿಂದ ಉತ್ತಮ ಸಹಕಾರ ಲಭ್ಯ.
ಕಟಕ
ಒತ್ತಡ ತುಂಬಿದ್ದ ಕಾರ್ಯವೊಂದು ಕೊನೆಗೂ ಮುಕ್ತಾಯ. ದೊಡ್ಡ ಹೊರೆ ಕಳಚಿದ ನಿರಾಳತೆ. ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಕಾಡೀತು.
ಸಿಂಹ
ಉದ್ಯೋಗಕ್ಕೆ ಸಂಬಂಸಿದ ಮಾನಸಿಕ ಒತ್ತಡ ಇಂದು ನಿವಾರಣೆ ಕಾಣುವುದು. ಎಲ್ಲವೂ ಸುಲಲಿತವಾಗಿ ಮುಗಿಯುವುದು. ಕೌಟುಂಬಿಕ ಶಾಂತಿ.
ಕನ್ಯಾ
ಒತ್ತಡದ ಕೆಲಸ. ಸಹೋದ್ಯೋಗಿಗಳ ಮೇಲೆ ರೇಗಾಡುವ ಸಂಭವ. ಅವರು ನಿಮ್ಮ ಮೇಲೆ ದ್ವೇಷ ಸಾಸಬಹುದು. ಅದಕ್ಕೆ ಆಸ್ಪದ ನೀಡದಿರಿ.
ತುಲಾ
ದೂರ ಸರಿದಿರುವ ವ್ಯಕ್ತಿಗಳು ಇಂದು ನಿಮ್ಮ ಸಮೀಪ ಬರಲು ಯತ್ನಿಸುವರು. ಹಳೆಯ ಕೋಪತಾಪ ಮರೆತು ಬಾಳುವುದು ಮುಖ್ಯ. ಬಂಧುತ್ವ ಬೆಳೆಸಿ.
ವೃಶ್ಚಿಕ
ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಇಂದು ಫಲ ನೀಡುತ್ತವೆ. ಬಯಸಿದ ಗುರಿ ಸಾಸುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ.
ಧನು
ಪ್ರವಾಹದ ವಿರುದ್ಧ ಈಜುವ ದುಸ್ಸಾಹಸ ಬೇಡ. ಎಲ್ಲರೊಡನೆ ಹೊಂದಿಕೊಂಡು ಸಾಗಿರಿ. ಕೌಟುಂಬಿಕ ವೈಮನಸ್ಸು ಸರಿಯಾಗುವುದು.
ಮಕರ
ಬಿಡುವಿಲ್ಲದ ಕೆಲಸದಲ್ಲಿ ಮುಳುಗುವಿರಿ. ಆದರೆ ಕೌಟುಂಬಿಕ ವಿಷಯಗಳನ್ನು ಕಡೆಗಣಿಸುವುದು ತರವಲ್ಲ. ಬಂಧುಗಳ ಹಿತ ಕಾಯಿರಿ.
ಕುಂಭ
ಪ್ರಗತಿದಾಯಕ ದಿನ. ಆದರೆ ನಿಮ್ಮ ಯಶಸ್ಸು ಕೆಲವರಲ್ಲಿ ಅಸೂಯೆ ತುಂಬುತ್ತದೆ. ಪ್ರೀತಿಯಲ್ಲಿ ಯಶಸ್ಸು ಗಳಿಸುವಿರಿ. ಕೌಟುಂಬಿಕ ಸಹಕಾರ.
ಮೀನ
ಜನರೊಂದಿಗೆ ಬೆರೆತು ಅವರ ಕೆಲಸದಲ್ಲಿ ಸಹಕಾರ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದು ನಿಮಗೂ ಒಳಿತು ತರುತ್ತದೆ. ಪ್ರತ್ಯೇಕತೆ ಸಾಸಬೇಡಿ.