ಹೊಸದಿಗಂತ ವರದಿ, ವಿಜಯಪುರ:
ತಂಪು ಪಾನೀಯ ಬಾಟಲಿಗಳು ತುಂಬಿದ್ದ ಬೃಹತ್ ವಾಹನ ಪಲ್ಟಿಯಾಗಿ ಲಕ್ಷಾಂತರ ರೂ. ಮೌಲ್ಯದ ತಂಪು ಪಾನೀಯ ಹಾನಿಯಾಗಿರುವ ಘಟನೆ ಜಿಲ್ಲೆಯ ಸಾರವಾಡ ಬಳಿಯ ದೋಣಿ ಬ್ರಿಡ್ಜ್ ಬಳಿ ನಡೆದಿದೆ.
ಗೋವಾದಿಂದ ಹೈದ್ರಾಬಾದ್ ಗೆ ತೆರಳುತ್ತಿದ್ದ ಬೃಹತ್ ವಾಹನ ಅಪಘಾತಗೊಂಡಿದ್ದು, ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ಪೋಲಿಸರು ರವಾನಿಸಿದ್ದಾರೆ.
ವಾಹನ ಪಲ್ಟಿಯಾಗುತ್ತಿದ್ದಂತೆ ತಂಪು ಪಾನೀಯ ಕೊಂಡೊಯ್ಯಲು ಜನರು ಮುಗಿಬಿದಿದ್ದರು.
ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.