ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪರಾರಿಯಾಗಿರುವ ಜುನೇದ್ ಬೆಂಗಳೂರು ಬ್ಲಾಸ್ಟ್ ಮಾಡಲು ಮಾಡಿದ್ದ ಪ್ಲಾನ್‌ನ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, ಸದ್ಯ ಆಫ್ಘನ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ದೊರೆತಿದೆ.
ಹೆಬ್ಬಾಳದ ಸುಲ್ತಾನಪಾಳ್ಯದ ಕುರಿ ವ್ಯಾಪಾರಿಯಾಗಿದ್ದ ಮೊಹಮ್ಮದ್ ಜುನೇದ್ ಲಷ್ಕರ್-ಎ-ತೊಯ್ಬಾ ಉಗ್ರರೊಂದಿಗೂ ನೇರ ಸಂಪರ್ಕ ಹೊಂದಿದ್ದ ಎನ್ನುವ ಸ್ಫೋಟಕ ಮಾಹಿತಿ ತಿಳಿದುಬಂದಿದೆ.
2017ರಲ್ಲಿ ನೂರ್ ಅಹ್ಮದ್ ಎಂಬಾತ ಜುನೇದ್ ಮನೆಗೆ ಬಂದು ಆತನ ಪತ್ನಿ ಮುಂದೆಯೇ ಬಟ್ಟೆ ಬಿಚ್ಚಿ ಹಲ್ಲೆ ಮಾಡಿ ಅವಮಾನಿಸಿದ್ದ. ಈ ದ್ವೇಷದಿಂದ ಜುನೇದ್ ಆತನನ್ನು ಅಪಹರಿಸಿ ಕೊಲೆ ಮಾಡಿ ಜೈಲಿಗೆ ಹೋಗಿದ್ದ. ಜೈಲಿನಿಂದ ಆತ ಹೊರಬಂದಿದ್ದೇ ಜಿಹಾದಿಯಾಗಿ. ಜೈಲಿನಲ್ಲಿ ಜುನೇದ್ ಉಗ್ರ ನಾಸೀರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ. ರಕ್ತಚಂದನ ಸಾಗಿಸುವ ಪ್ರಕರಣದಲ್ಲಿ ಮತ್ತೆ ಜುನೇದ್ ಜೈಲು ಸೇರಿದ್ದು, ಜಾಮೀನಿನ ಮೇಲೆ ಹೊರಬಂದಿದ್ದ. ಹೊರಬಂದ ನಂತರ ತಂಡವನ್ನೇ ಕಟ್ಟಿಕೊಂಡಿದ್ದ ಎನ್ನಲಾಗಿದೆ.