ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಸ್‌ಕೆ vs ಕೆಕೆಆರ್ ನಡುವಿನ ಪಂದ್ಯದಲ್ಲಿ ಕ್ಯಾಪ್ಟನ್ ಎಂ.ಎಸ್ ಧೋನಿ ಅವರ LBW Out ತೀರ್ಪು ಈಗ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿವೆ.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ತವರು ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಸೋಲು ಹಾಗೂ ಸತತ 5ನೇ ಸೋಲು ಅನುಭವಿಸಿದ ಕೆಟ್ಟ ದಾಖಲೆ ಸಿಎಸ್‌ಕೆ ಪಾಲಾಗಿದೆ. ಇದರ ನಡುವೆ ಎಲ್‌ಬಿಡಬ್ಲ್ಯೂ ಔಟ್ ತೀರ್ಪು ಈಗ ವಿವಾದ ಉಂಟುಮಾಡಿದೆ.
ಧೋನಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಸುನೀಲ್ ನರೈನ್ ಅವರ ಎಸೆತದಲ್ಲಿ ಎಲ್‌ಬಿಡಬ್ಲೂ ವಿಕೆಟ್ ಒಪ್ಪಿಸಿದರು. ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಧೋನಿ 3ನೇ ಅಂಪೈರ್ ರಿವ್ಯೂ ಪಡೆದುಕೊಂಡರು. ಅಲ್ಟ್ರಾಎಡ್ಜ್‌ನಲ್ಲಿ ಸಣ್ಣ ಸ್ಪೈಕ್‌ಗಳು ಕಂಡುಬಂದರೂ, 3ನೇ ಅಂಪೈರ್ ಕೂಡ ಔಟ್ ಎಂದೇ ತೀರ್ಪು ನೀಡಿದ್ದಾರೆ.
ಧೋನಿ ಅವರದ್ದು ನಾಟೌಟ್ ಆಗಿತ್ತು. 3ನೇ ಅಂಪೈರ್ ಈ ಸ್ಟ್ರೈಕ್‌ಗಳನ್ನು ಗುರುತಿಸಿಯೂ ಔಟ್ ಎಂದು ತೀರ್ಪು ನೀಡಿದ್ದು ಹೇಗೆ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇನ್ನೂ ಕೆಲವರು ಐಪಿಎಲ್ ಪಂದ್ಯಗಳು ಮೊದಲೇ ಫಿಕ್ಸ್ ಆಗಿರುತ್ತವೆ ಎಂಬುದಕ್ಕೆ ಧೋನಿ ವಿವಾದಾತ್ಮಕ ಔಟ್ ತೀರ್ಪು ಸಾಕ್ಷಿ ಎಂದು ಅಸಮಾಧಾನ ಹೊರಹಾಕಿದ್ದಾರೆ.